ಕರ್ನಾಟಕ

karnataka

ETV Bharat / state

​​​​​​​ರಾಕ್ಷಸ ಆರ್ಥಿಕತೆ ಜಾಗದಲ್ಲಿ ಪವಿತ್ರ ಆರ್ಥಿಕತೆ ಸ್ಥಾಪಿಸಿ: ರಂಗಕರ್ಮಿ ಪ್ರಸನ್ನ ಆಗ್ರಹ

ಬೆಂಗಳೂರಿನ ಗ್ರಾಮ ಸೇವಾ ಸಂಘದಿಂದ ಪರಿಸರ ಗೆಲ್ಲಿಸಿ, ದುಡಿಮೆ ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ಉಪವಾಸದಲ್ಲಿ ರಂಗಕರ್ಮಿ ಪ್ರಸನ್ನ ಅವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ.

ರಂಗಕರ್ಮಿ ಪ್ರಸನ್ನ

By

Published : Oct 9, 2019, 8:35 AM IST

Updated : Oct 9, 2019, 8:45 AM IST

ಬೆಂಗಳೂರು:ಪವಿತ್ರ ಆರ್ಥಿಕತೆಯ ಬಗ್ಗೆ ವಿಶ್ವಕ್ಕೆ ತಿಳಿಸಿ. ಇದು ಗಾಂಧೀಜಿ ಪ್ರತಿಪಾದಿಸಿದ ಆರ್ಥಿಕತೆ. ರಾಕ್ಷಸ ಆರ್ಥಿಕತೆಯನ್ನು ದೇಶದೊಳಗೆ ಬಿಟ್ಟುಕೊಳ್ಳಬೇಡಿ ಎಂದು ರಂಗಕರ್ಮಿ ಪ್ರಸನ್ನ ಅವರು ಒತ್ತಾಯಿಸಿದ್ದಾರೆ.

ರಂಗಕರ್ಮಿ ಪ್ರಸನ್ನ

ಗ್ರಾಮ ಸೇವಾ ಸಂಘದಿಂದ ಪರಿಸರ ಗೆಲ್ಲಿಸಿ, ದುಡಿಮೆ ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಮೂರು ದಿನಗಳಿಂದ ಉಪವಾಸ ಕುಳಿತಿದ್ದಾರೆ. ಇಂದು ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಲಾಗಿದೆ.

ಪವಿತ್ರ ಆರ್ಥಿಕತೆ ಎಂದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಕೈಗೊಳ್ಳುವುದಾಗಿದೆ. ಈ ಉತ್ಪಾದನೆಗಳಿಗೆ ಶೂನ್ಯ ತೆರಿಗೆ ವಿಧಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಂದು ವರ್ಗಕ್ಕೆ ಅನುಕೂಲ ಮಾಡುವ ರಾಕ್ಷಸ ನೀತಿಯನ್ನು ಹಿಮ್ಮೆಟ್ಟಿಸಬೇಕು. ದುಡಿಯುವ, ಕಾರ್ಮಿಕರ ಪರವಾದ ಪವಿತ್ರ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಪ್ರಸನ್ನ ಅವರು ನಡೆಸಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

Last Updated : Oct 9, 2019, 8:45 AM IST

ABOUT THE AUTHOR

...view details