ಕರ್ನಾಟಕ

karnataka

ETV Bharat / state

ಗಡಿನಾಡಿನಲ್ಲಿ ಮರಾಠಿ ಹುಡುಗಿಯಾಗಿ ಕಾಣಿಸಿಕೊಂಡ ಸಂಚಿತಾ ಪಡುಕೋಣೆ - Sanchita Padukone in Gadinadu Cinema

ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಗಡಿನಾಡು' ಚಿತ್ರದ ದ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

'ಗಡಿನಾಡು' ಚಿತ್ರದ ದ್ವನಿಸಾಂದ್ರಿಕೆ ಬಿಡುಗಡೆ

By

Published : Nov 17, 2019, 8:31 AM IST

ನೆಲ-ಜಲ ಭಾಷೆ ವಿಚಾರವಾಗಿ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳು ಬಂದಿದ್ದು, ಈಗ ಅವುಗಳ ಸಾಲಿಗೆ 'ಗಡಿನಾಡು'ಚಿತ್ರ ಸೇರಿದೆ. ಸದ್ದಿಲ್ಲದೆ ಗಡಿನಾಡು ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ನಿನ್ನೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ.

ನಗರದ ಕಲಾವಿದರ ಸಂಘದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಗಡಿನಾಡು ಚಿತ್ರದ ದ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಗಡಿ ವಿಚಾರದ ಜೊತೆಗೆ ಎರಡು ರಾಜ್ಯಗಳ ನಡುವಿನ ಒಂದು ಪ್ರೇಮ ಕಥೆಯನ್ನು ಹೆಣೆಯಲಾಗಿದೆ. ನಿರ್ದೇಶಕ ನಾಗ್ ಹುಣಸೂರ್ ಈ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ.

'ಗಡಿನಾಡು' ಚಿತ್ರದ ದ್ವನಿಸಾಂದ್ರಿಕೆ ಬಿಡುಗಡೆ

ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಚಿತ್ರದ ನಾಯಕ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು, ಪರಿಹರಿಸಲು ಗಡಿನಾಡ ಸೇನೆ ಕಟ್ಟುತ್ತಾನೆ. ಇದರ ಮಧ್ಯೆ ಮರಾಠಿ ಚೆಲುವೆಯೊಂದಿಗೆ ಪ್ರೇಮಾಂಕುರವಾಗುತ್ತದೆ. ಇಲ್ಲಿಂದ ಚಿತ್ರ ಕಥೆ ತಿರುವು ಪಡೆಯಲಿದ್ದು, ಕನ್ನಡ ಪರ ಹೋರಾಟ ಮಾಡುವ ಕಾಲೇಜ್ ವಿದ್ಯಾರ್ಥಿಯಾಗಿ ಪ್ರಭುಸೂರ್ಯ ನಟಿಸಿದ್ದಾರೆ.

ABOUT THE AUTHOR

...view details