ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕರ್ನಾಟಕ ದಕ್ಷಿಣ ಪ್ರಾಂತದ ನೂತನ ಪ್ರಾಂತ ಸಂಘ ಚಾಲಕರಾಗಿ ಜಿ.ಎಸ್.ಉಮಾಪತಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆರ್‌ಎಸ್ ಎಸ್ ಪ್ರಕಟಣೆ ತಿಳಿಸಿದೆ.
ಉಮಾಪತಿ ಪರಿಚಯ: ಇವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಆಡನೂರು ಗ್ರಾಮದವರು. ದಾವಣಗೆರೆಯಲ್ಲಿ ಬಿ.ಇ.ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ನಂತರ ಮಂಗಳೂರಿನ ಎನ್ಐಟಿಕೆಯಲ್ಲಿ (ಆಗಿನ ಕೆಆರ್ಇಸಿ) ಎಂಇ ಇನ್‌ಸ್ಟ್ರಕ್ಚರ್ಸ್ ಹಾಗೂ ಕೋಲ್ಕತಾದಲ್ಲಿ ಎಂಇಇನ್ ಪಬ್ಲಿಕ್ ಹೆಲ್ತ್ ವ್ಯಾಸಂಗ ಪೂರೈಸಿದ್ದಾರೆ. ಕರ್ನಾಟಕ ಸರ್ಕಾರದ ಪಿಡಬ್ಲ್ಯುಡಿ ಇಲಾಖೆಯಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿ, ನಂತರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.