ಬೆಂಗಳೂರು: ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿರುವುದು ದುರದೃಷ್ಟಕರ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ಆಪ್ತ ಸಹಾಯಕನ ಆತ್ಮಹತ್ಯೆ ದುರದೃಷ್ಟಕರ: ಪರಮೇಶ್ವರ್ - ಪರಮೇಶ್ವರ್ ಪ್ರತಿಕ್ರಿಯೆ
ತಮ್ಮ ಆಪ್ತ ಸಹಾಯಕನ ಆತ್ಮಹತ್ಯೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಪರಮೇಶ್ವರ್ ಇದೊಂದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ಪರಮೇಶ್ವರ್, ಮಾಜಿ ಡಿಸಿಎಂ
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಮೇಶ್ ತುಂಬಾ ಒಳ್ಳೆಯ ಹುಡುಗ, ಏಕೆ ಆತ್ಮಹತ್ಯೆ ಮಾಡಿಕೊಂಡ ಎಂದು ತಿಳಿಯುತ್ತಿಲ್ಲ. ಬೆಳಗ್ಗೆ ಕೂಡ ಆತನಿಗೆ ಧೈರ್ಯ ಹೇಳಿದ್ದೆ. ಆದ್ರೆ ಈಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ನನಗೆ ನಂಬಲು ಆಗುತ್ತಿಲ್ಲ. ಐಟಿ ಅಧಿಕಾರಿಗಳು ಬೆದರಿಕೆ ಹಾಕಿದಕ್ಕೆ ಆತ್ಮ ಹತ್ಯೆ ಮಾಡಿಕೊಂಡರಾ ಎನ್ನುವ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಿಂದ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳಕ್ಕೆ ಭೇಟಿ ಕೊಡಲು ಪರಮೇಶ್ವರ್ ತೆರಳಿದ್ದಾರೆ.