ಕರ್ನಾಟಕ

karnataka

ETV Bharat / state

ಡಿ.ಜೆ. ಹಳ್ಳಿ, ಕೆ. ಜಿ. ಹಳ್ಳಿ ವಾಹನಗಳಿಗೆ ಬೆಂಕಿ: ಎಫ್​ಎಸ್​ಎಲ್​ ವರದಿಯಲ್ಲಿ ಪುಂಡರ ಪ್ಲಾನ್​ ಬಹಿರಂಗ

ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿಯಲ್ಲಿ ಗಲಭೆ ಪ್ರಕರಣ ಸಂಬಂಧ ಗಲಭೆಕೋರರ ಪೈಶಾಚಿಕ ಕೃತ್ಯಕ್ಕೆ ನೂರಾರು ವಾಹನಗಳು ನಾಶವಾಗಿದ್ದು, ಈ ಘಟನೆ ಪೂರ್ವ ನಿಯೋಜಿತವೆಂದು ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿ ತಿಳಿಸಿದೆ.

ವಿಧಿವಿಜ್ಞಾನ ಪ್ರಯೋಗಾಲಯ ಪ್ರಾಥಮಿಕ ವರದಿ
ವಿಧಿವಿಜ್ಞಾನ ಪ್ರಯೋಗಾಲಯ ಪ್ರಾಥಮಿಕ ವರದಿ

By

Published : Aug 16, 2020, 7:43 AM IST

ಬೆಂಗಳೂರು:‌ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಕಿಡಿಗೇಡಿಗಳ ಪೈಶಾಚಿಕ ಕೃತ್ಯದ ಅಸಲಿ ಬಣ್ಣವನ್ನು ಬಯಲಾಗುವಂತೆ ಮಾಡಿದೆ ವಿಧಿವಿಜ್ಞಾನ ಪ್ರಯೋಗಾಲಯ ಪ್ರಾಥಮಿಕ ವರದಿ.

ಗಲಭೆಯು ಪೂರ್ವ ನಿಯೋಜಿತ ಕೃತ್ಯವೆಂದು ಈಗಾಗಲೇ ಪೊಲೀಸರ ತನಿಖೆಯಲ್ಲಿ ಮೇಲ್ನೋಟಕ್ಕೆ ಗೊತ್ತಾಗಿದೆ.‌‌ ಇದಕ್ಕೆ‌ ಪೂರಕವಾಗಿ ಗಲಭೆಪೀಡಿತ ಪ್ರದೇಶಗಳಲ್ಲಿ ನಡೆಸಿದ‌ ಎಫ್ಎಸ್ಎಲ್ ತಜ್ಞರ ಪ್ರಾಥಮಿಕ ವರದಿಯಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ‌ ಸೀಮೆಎಣ್ಣೆ ತಂದು ಗಲಭೆಕೋರರು ಯಾರಿಗೂ ಗೊತ್ತಿಲ್ಲದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಲ್ಲಿ‌ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಪ್ರಕರಣ ತನಿಖಾಧಿಕಾರಿಗಳಿಗೆ ಎಫ್ಎಸ್ಎಲ್ ತಜ್ಞರು ತಮ್ಮ ತಪಾಸಣೆಯ ಪ್ರಾಥಮಿಕ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಧಿವಿಜ್ಞಾನ ಪ್ರಯೋಗಾಲಯ ಪ್ರಾಥಮಿಕ ವರದಿ

ಗಲಭೆ ಬಳಿಕ ಘಟನಾ ಸ್ಥಳದಲ್ಲಿ 12 ವಾಹನಗಳ ಮೇಲ್ಮೈ ಪರೀಕ್ಷೆಗೆ ಮಾಡಿದ್ದರು. ಸಿಕ್ಕ ವಸ್ತುಗಳ ಕಣಗಳ ಸಂಗ್ರಹಿಸಿದ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಒಂದು ಕಡೆ ಪೆಟ್ರೋಲ್ ಮತ್ತೊಂದು ಕಡೆ ಡೀಸೆಲ್ ಹಾಗೂ ಸೀಮೆಎಣ್ಣೆ ತಂದು ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ವಾಹನ ಭಸ್ಮ ಮಾಡೋಕೆ ಮೊದಲೇ ಪ್ಲಾನ್:ದೊಡ್ಡ ಮಟ್ಟದಲ್ಲಿ ಗಲಭೆ ನಡೆಸಲು ಸಂಚು ರೂಪಿಸಿದ್ದ ಕಿಡಿಗೇಡಿಗಳು ಪೊಲೀಸ್​ ಠಾಣೆಯನ್ನು ನಾಶಪಡಿಸಿ ಬಳಿಕ ಆವರಣದಲ್ಲಿದ್ದ ಪೊಲೀಸ್ ವಾಹನ ಹಾಗೂ ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಕ್ಕೂ ಮುನ್ನ ಬಾಟಲ್​ಗಳಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ‌ ಸೀಮೆಎಣ್ಣೆ ತಂದಿದ್ದಾರೆ. ಬಳಿಕ ಬೈಕ್​ಗಳ ಪೆಟ್ರೋಲ್ ಟ್ಯಾಂಕ್ ತೆರೆಯಲು ಹರಿತವಾದ ಆಯುಧ ಬಳಸಿ ಟ್ಯಾಂಕ್​ನ ಮೇಲ್ಭಾಗವನ್ನು ಸಣ್ಣ ಪ್ರಮಾಣದಲ್ಲಿ ಓಪನ್ ಮಾಡಿದ್ದಾರೆ. ಚಿಕ್ಕ ಚಿಕ್ಕ ಬಟ್ಟೆಗೆ ಪೆಟ್ರೋಲ್ ಸುರಿದು ಆ ಮೂಲಕ ವಾಹನಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಗಲಭೆಪೀಡಿತ ಪ್ರದೇಶಗಳಲ್ಲಿ ಕಿಡಿಗೇಡಿಗಳ ಕೆಂಗಣ್ಣಿಗೆ 100ಕ್ಕಿಂತ ಹೆಚ್ಚು ವಾಹನಗಳು ನಾಶವಾಗಿವೆ.

ABOUT THE AUTHOR

...view details