ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತುಂಬಾ ಜಾಲಿಯಾಗಿ ಯುವಜನತೆ ಫ್ರೆಂಡ್ ಶಿಪ್ಡೇ ಸೆಲೆಬ್ರೇಷನ್ ಮಾಡಿದ್ರು.
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ.. ಸಿಲಿಕಾನ್ ಸಿಟಿಯಲ್ಲಿ ಹ್ಯಾಪಿ ಫ್ರೆಂಡ್ ಶಿಪ್ ಡೇ - Banglore youth celebrated friendship day
ಉದ್ಯಾನಗರಿ ಬೆಂಗಳೂರಿನಲ್ಲಿ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಬಹಳ ಸಂಭ್ರಮದಿಂದ ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಯ್ತು.
ಹಿಂದೆ ತಿರುಗಿ ನೋಡಿದರೆ ನೆನಪುಗಳ ರಾಶಿ, ಗೆಳೆಯ-ಗೆಳತಿಯರ ಜೊತೆ ನಡೆದ ಹೆಜ್ಜೆ ಗುರುತು.. ಅಕ್ಷರಕ್ಕೆ ಪೋಣಿಸಲಾಗದಷ್ಟು ಅಕ್ಕರೆ. ಜೀವನದ ಏಳು ಬೀಳಿನಲ್ಲಿ ಹೆಗಲ ಮೇಲೆ ಕೈ ಹಾಕಿ ಜೊತೆಗಿದ್ದವರು,ಇರುವವರು ಎಷ್ಟೋ ಜನ.. ಅಂತಹ ಅಪರೂಪ ಕ್ಷಣವನ್ನ ಇಂದು ಫ್ರೆಂಡ್ ಶಿಪ್ ಡೇ ಹೆಸರಿನಲ್ಲಿ ಸೆಲೆಬ್ರೇಷನ್ ಮಾಡಲಾಯಿತು. ಹಿಂದೆ ಹೇಗೆ ಚೆಂದದ ಅಂದದ ದಾರಗಳಿಂದ ಮಾಡಿದ್ದ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನ ಕಟ್ಟಿ ಸಂಭ್ರಮಿಸುತ್ತಿದ್ದರೋ ಈಗಲೂ ಆ ಟ್ರೆಂಡ್ ಮುಂದುವರೆದಿದ್ದು, ಕೈಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟುವ ಸಂಪ್ರದಾಯ ಮುಂದುವರೆದಿದೆ.
ತಂತ್ರಜ್ಞಾನ ಮುಂದುವರೆದಂತೆ ಮೊಬೈಲ್‌ನಲ್ಲೇ ಕೂತಲ್ಲಿ ಸಾವಿರಾರು ಜನರಿಗೆ ಶುಭಕೋರುವ ಟ್ರೆಂಡ್ ಶುರುವಾಗಿ ವರುಷಗಳೇ ಉರುಳಿವೆ. ಇನ್ನು ಬೆಂಗಳೂರಿನ ನಿವಾಸಿ ಸೌಮ್ಯ ತಮ್ಮ ಸ್ನೇಹಿತರೊಂದಿಗೆ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿ ಶುಭಾಶಯ ತಿಳಿಸಿದರು. ದೂರದ ಊರಿನಲ್ಲಿ ವಾಸವಾಗಿರೋ ಸ್ನೇಹಿತರಿಗಾಗಿ, ಡ್ಯಾನ್ಸ್ ಮಾಡಿ ಸಂಭ್ರಮಿಸಿ ಖುಷಿ ಪಟ್ಟರು. ಕೈಯಲ್ಲಿ ಟ್ಯಾಟು ಹಾಕಿಸಿಕೊಂಡು ಖುಷಿ ಪಟ್ಟರು.. ಉದ್ಯಾನನಗರಿಯಲ್ಲಿ ಸ್ನೇಹಿತರ ದಿನದ ಸೆಲೆಬ್ರೇಷನ್ ಜೋರಾಗಿಯೇ ಇತ್ತು.