ಕರ್ನಾಟಕ

karnataka

ETV Bharat / state

ನಾಳೆಯಿಂದ ಉಚಿತ ಹಾಲು ವಿತರಣೆ ಸ್ಥಗಿತ! - ಕೆಎಂಎಫ್​ ನಿರ್ಧಾರ

ಲಾಕ್​ಡೌನ್​ ಹಿನ್ನೆಲೆ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಇಷ್ಟು ದಿನಗಳ ಕಾಲ ನೀಡಲಾಗುತ್ತಿದ್ದ ಉಚಿತ ಹಾಲನ್ನು ಸರ್ಕಾರ ನಾಳೆಯಿಂದ ನಿಲ್ಲಿಸಲಿದೆಯೇ? ಈ ಬಗ್ಗೆ ಕೆಎಂಎಫ್​ ಏನು ಹೇಳುತ್ತದೆ ಗೊತ್ತಾ?

Free milk delivery from tomorrow
ನಾಳೆಯಿಂದ ಉಚಿತ ಹಾಲು ವಿತರಣೆ ಸ್ಥಗಿತ!

By

Published : Apr 30, 2020, 11:12 PM IST

ಬೆಂಗಳೂರು: ಕೆಎಂಎಫ್ ವತಿಯಿಂದ ನಗರದ ಬಡ ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಹಲವೆಡೆ ನೀಡಲಾಗುತ್ತಿದ್ದ ಉಚಿತ ಹಾಲನ್ನು ಸರ್ಕಾರ ನಾಳೆಯಿಂದ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಈ ಹಿಂದೆ ಲಾಕ್​​ಡೌನ್ ವಿಸ್ತರಣೆ ಆದಾಗ ಹಾಲು ವಿತರಣೆಯನ್ನು ಏ. 30ರವರೆಗೆ ವಿತರಿಸಲು ತೀರ್ಮಾನಿಸಲಾಗಿತ್ತು. ಆದರೆ ನಾಳೆಯಿಂದ ಉಚಿತ ಹಾಲು ವಿತರಣೆ ಬಗ್ಗೆ ಸರ್ಕಾರ ಯಾವುದೇ ಸೂಚನೆ ನೀಡದೆ ಇರುವ ಕಾರಣ ಕೆಎಂಎಫ್ ಉಚಿತ ಹಾಲು ವಿತರಣೆ ಸ್ಥಗಿತಗೊಳಿಸಲಿದೆ ಎಂದು ಕೆಎಂಎಫ್ ಹೇಳಿದೆ.

ಇನ್ನು ಲಾಕ್​​ಡೌನ್ ಮೇ 3ರವರೆಗೆ ಇರುವ ಹಿನ್ನೆಲೆಯಲ್ಲಿ ಹಾಲಿನ ನಿರೀಕ್ಷೆಯಲ್ಲಿ ಕೂಲಿ ಕಾರ್ಮಿಕರು, ಬಡವರು ಇದ್ದಾರೆ. ಉಚಿತ ಹಾಲು ವಿತರಣೆ ನಿಲ್ಲಿಸಿದರೆ ಪ್ರತಿಪಕ್ಷಗಳು ಸರ್ಕಾರಕ್ಕೆ ಒತ್ತಡ ಹಾಕಲಿವೆ ಎನ್ನಲಾಗುತ್ತಿದೆ.

ABOUT THE AUTHOR

...view details