ಬೆಂಗಳೂರು: ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹತ್ತು ದಿನಗಳ ಕಾಲ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿದೆ.
ಹೊಸ ವರ್ಷದಲ್ಲಿ ಕೋವಿಡ್ನಂತಹ ಸಂಕಷ್ಟಗಳು ಬಾಧಿಸದಿರಲಿ, ಎರಡನೇ ಅಲೆಯ ಕೊರೊನಾ ಸೋಂಕು ವ್ಯಾಪಿಸದಿರಲಿ, ಮುಂಬರುವ ದಿನಗಳಲ್ಲಿ ಎಲ್ಲರೂ ಆರೋಗ್ಯದಿಂದಿರಬೇಕು ಎನ್ನುವ ಆಶಯದೊಂದಿಗೆ ಜನವರಿ 1 ರಿಂದ 10ರ ವರೆಗೆ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದೆ. ಉಚಿತ ಸೇವೆ ಮೂಲಕ ಹೊಸ ವರ್ಷವನ್ನು ಸಂಭ್ರಮ – ಸಡಗರದಿಂದ ಸ್ವಾಗತಿಸಲು ಆಡಳಿತ ಮಂಡಳಿ, ವೈದ್ಯರು ಮತ್ತು ಸಿಬ್ಬಂದಿ ಸಜ್ಜಾಗಿದ್ದಾರೆ.
ಪ್ರವೇಶ ಶುಲ್ಕ, ರ್ಯಾಪಿಡ್ ಆಂಟಿಜನ್ ಪರೀಕ್ಷೆ , ವೈದ್ಯಕೀಯ ಚಿಕಿತ್ಸೆ, ವಾರ್ಡ್ ಶುಲ್ಕ, ಓಟಿ ಶುಲ್ಕ, ಶಸ್ತ್ರಚಿಕಿತ್ಸಾ ಶುಲ್ಕ, ವೈದ್ಯರು ಮತ್ತು ದಾದಿಯರ ಸೇವಾ ಶುಲ್ಕ, ಔಷಧ ವೆಚ್ಚ, ಮೂಲ ಪ್ರಯೋಗಾಲಯ ತನಿಖಾ ವೆಚ್ಚ, ವಿಕಿರಣಶಾಸ್ತ್ರ ಮತ್ತು ಸ್ಕ್ರೀನಿಂಗ್ (ಎಕ್ಸ ರೇ, ಸಿಟಿ, ಎಂಆರ್‌ಐ)ಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಜತೆಗೆ ಉಚಿತ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.
ರೋಗಿಗಳು ಭರಿಸಬೇಕಾದ ಕೆಲ ಶುಲ್ಕಗಳು :
ಕಾರ್ಡಿಯಾಲಜಿ, ಮೆಡಿಕಲ್ ಗ್ಯಾಸ್ಟ್ರೊ ಎಂಟ್ರೋಲಜಿ, ಇಂಟರ್ವೆನ್ಷನ್, ರೇಡಿಯಾಲಜಿ, ಮೂತ್ರಶಾಸ್ತ್ರ ಮತ್ತು ನೆಫ್ರಾಲಜಿಗೆ ಸಂಬಂಧಪಟ್ಟ (ಸ್ಟೆಂಟ್ಗಳು , ಕವಾಟಗಳು, ಮತ್ತು ಇಂಪ್ಲಾಂಟ್ಗಳ ಶುಲ್ಕ ಹಾಗೂ ಡಯಾಲಿಸಿಸ್) ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.
ಸ್ಥಳ : ಸಪ್ತಗಿರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ
ನಂ. 15, ಚಿಕ್ಕಸಂದ್ರ, ಎಂಟನೇ ಮೈಲಿ ಹತ್ತಿರ, ಹೆಸರಘಟ್ಟ ಮುಖ್ಯರಸ್ತೆ, ಬೆಂಗಳೂರು - 560090
ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : 9901653964, 8884439163, 9844244590, 8884439153.
ಇದನ್ನೂ ಓದಿ:ವಸಂತಪುರ ಅಪಾರ್ಟ್ಮೆಂಟ್ನಲ್ಲಿ ಸೀಲ್ಡೌನ್.. ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂ ಸೇವಕರ ನೇಮಕ