ಕರ್ನಾಟಕ

karnataka

ETV Bharat / state

ಫ್ರೀ ಕಾಶ್ಮೀರ್​ ಪೋಸ್ಟರ್ ಪ್ರದರ್ಶನ ಪ್ರಕರಣ: ಯುವತಿಗೆ ಮಾ.5ರ ವರೆಗೆ ನ್ಯಾಯಾಂಗ ಬಂಧನ - ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ ಎಂದು ಪೋಸ್ಟರ್

ಬೆಂಗಳೂರಿನ ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ್​​ ಎಂದು ಪೋಸ್ಟರ್ ಪ್ರದರ್ಶಿಸಿ ಬಂಧನಕ್ಕೆ ಒಳಗಾಗಿರುವ ಯುವತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾ. ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.

ನ್ಯಾಯಾಂಗ ಬಂಧನ
ನ್ಯಾಯಾಂಗ ಬಂಧನ

By

Published : Feb 21, 2020, 9:42 PM IST

ಬೆಂಗಳೂರು:ಟೌನ್ ಹಾಲ್ ಮುಂದೆ ಫ್ರೀ ಕಾಶ್ಮೀರ್​ ಎಂದು ಪೋಸ್ಟರ್ ಪ್ರದರ್ಶಿಸಿ ಬಂಧನಕ್ಕೊಳಗಾಗಿರುವ ಯುವತಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾ. ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.

ಫ್ರೀ ಕಾಶ್ಮೀರ್​ ಎಂದು ಪೋಸ್ಟರ್ ಪ್ರದರ್ಶಿಸಿದ್ದ ಯುವತಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಕೋರಮಂಗಲದ ಎನ್​ಜಿವಿ ಬಡಾವಣೆಯಲ್ಲಿರುವ 6ನೇ ಎಸಿಎಂಎಂ ನ್ಯಾಯಾಧೀಶರ ಮನೆಗೆ ಯುವತಿಯನ್ನು ಎಸ್.ಜೆ. ಪಾರ್ಕ್ ಪೊಲೀಸರು ಹಾಜರುಪಡಿಸಿದ್ದರು. ಸರ್ಕಾರಿ ಅಭಿಯೋಜಕರು ಹಾಗೂ ಆರೋಪಿ ಪರ ವಕೀಲರ ವಾದ ಆಲಿಸಿ ಅಂತಿಮವಾಗಿ ಮಾ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.‌ ಸದ್ಯದಲ್ಲೇ ಆಕೆಯನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details