ಬೆಂಗಳೂರು:ಡಾ ರಾಜಕುಮಾರ್ ಹೆಸರಿನಲ್ಲಿ ಈಗಾಗಲೇ ಐಎಎಸ್ ಅಕಾಡೆಮಿ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಡಾ. ವಿಷ್ಣುವರ್ಧನ್ ಹೆಸರಿನಲ್ಲೂ ಐಎಎಸ್, ಕೆಎಎಸ್ ಪರೀಕ್ಷೆ ಬರೆಯುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯೋಜನೆಗೆ ಡಾ.ಜ್ಯೋತಿ ಅವರ ನೇತೃತ್ವದ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ತುಂಬು ಸಹಕಾರ ನೀಡುತ್ತಿದೆ. ಇವರಿಬ್ಬರ ಸಹಯೋಗದಲ್ಲಿ ಈಗಾಗಲೇ ಮೊದಲನೇ ಬ್ಯಾಚ್ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಉನ್ನತ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಅದೇ ವಿಶ್ವಾಸದಲ್ಲಿ ಈಗ 2ನೇ ಬ್ಯಾಚ್ನ್ನು ಆರಂಭಿಸುತ್ತಿದ್ದಾರೆ. ಈ ಸುವರ್ಣಾವಕಾಶವನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.