ಕರ್ನಾಟಕ

karnataka

ETV Bharat / state

ಪಿಎಂಜಿಕೆಎವೈ ಅಡಿ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತ ವಿತರಣೆ - Free distribution of rice

ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಉಚಿತ ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡೌನ್​ಗಳಿಂದ ಪಡೆದುಕೊಳ್ಳಲು ಆರಂಭಿಸಿದೆ.

free-distribution-of-5kg-of-rice-by-pmgkay
ಪಿಎಂಜಿಕೆಎವೈ ಅಡಿ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತ ವಿತರಣೆ

By

Published : Apr 30, 2021, 2:28 AM IST

ಬೆಂಗಳೂರು: ಪಡಿತರ ಕಾರ್ಡ್ ಹೊಂದಿರುವ ಸದಸ್ಯರಿಗೆ ಕೇಂದ್ರ ತಿಂಗಳಿಗೆ ತಲಾ ಐದು ಕೆ.ಜಿ.ಅಕ್ಕಿ ಯನ್ನು ಉಚಿತವಾಗಿ ನೀಡಲಿದೆ.

ಕೋವಿಡ್ ಸಾಂಕ್ರಾಮಿಕ ಹರಡಿರುವ ಕಾರಣಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿ 2021ರ ಮೇ ಮತ್ತು ಜೂನ್ ತಿಂಗಳಿಗೆ ನಾಲ್ಕು ಕೋಟಿ ಪಡಿತರ ಕಾರ್ಡ್ ಹೊಂದಿರುವ ಸದಸ್ಯರಿಗೆ ತಿಂಗಳಿಗೆ ತಲಾ ಐದು ಕೆ.ಜಿ.ಅಕ್ಕಿ ಯನ್ನು ಉಚಿತವಾಗಿ ನೀಡಲಿದೆ.

ಈ‌ ಸಂಬಂಧ ಭಾರತೀಯ ಆಹಾರ ನಿಗಮ ಪ್ರಕಟಣೆ ಹೊತಡಿಸಿದ್ದು, ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗಾಗಲೇ ಉಚಿತ ಅಕ್ಕಿಯನ್ನು ಭಾರತೀಯ ಆಹಾರ ನಿಗಮದ ಗೋಡೌನ್​ಗಳಿಂದ ಪಡೆದುಕೊಳ್ಳಲು ಆರಂಭಿಸಿದೆ. ರಾಷ್ಟ್ರೀಯ ಆಹಾರ ಭಧ್ರತಾ ಕಾಯ್ದೆ ಅಡಿ ಈಗಾಗಲೇ ನಿಗದಿತವಾಗಿ ನೀಡುತ್ತಿದ್ದ ಆಹಾರ ಧಾನ್ಯಕ್ಕಿಂತ ಹೆಚ್ಚುವರಿಯಾಗಿ 4,01,930 ಟನ್ ಅಕ್ಕಿಯನ್ನು ಭಾರತೀಯ ಆಹಾರ ನಿಗಮ ಉಚಿತವಾಗಿ ಕರ್ನಾಟಕ ಸರ್ಕಾರಕ್ಕೆ ನೀಡುತ್ತಿದೆ.

ABOUT THE AUTHOR

...view details