ಬೆಂಗಳೂರು :ಕೊರೊನಾ ಸೋಂಕಿನ ಪರೀಕ್ಷೆ ನಡೆಸಲು ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ಹಣ ತೆಗೆದುಕೊಳ್ಳುತ್ತಾರೆ. ಇದರಿಂದ ಜನರಿಗೆ ಸಹಾಯವಾಗಲಿ ಎಂದು ಸೌಥ್ ಝೋನ್ನಲ್ಲಿ ಮೊಬೈಲ್ ವ್ಯಾನ್ ಮೂಲಕ ಉಚಿತ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ.
ದಕ್ಷಿಣ ವಿಭಾಗದಲ್ಲಿ ಉಚಿತ ಕೋವಿಡ್ ಟೆಸ್ಟ್ : ಟ್ವೀಟ್ ಮೂಲಕ ವಿಚಾರ ತಿಳಿಸಿದ ಡಿ ರೂಪಾ - Bangalore latest news
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಅಧಿಕ ಹಣ ವ್ಯಯ ಮಾಡಬೇಕು. ಇದರಿಂದ ಜನರಿಗೆ ಸಹಾಯವಾಗಲೆಂದು ಸೌಥ್ ಝೋನ್ನಲ್ಲಿ ಮೊಬೈಲ್ ವ್ಯಾನ್ ಮೂಲಕ ಉಚಿತ ಕೋವಿಡ್ ಟೆಸ್ಟ್ ಮಾಡಲು ಮುಂದಾಗಿದೆ.
DRupa
ನಗರದ ಬಿಬಿಎಂಪಿ ವಾರ್ ರೂಂ ಮುಖ್ಯಸ್ಥ ಐಎಎಸ್ ಮನೀಷ್ ಮೌದ್ಗಿಲ್ ಅವರ ತಂಡದ ವ್ಯಾನ್ ಇದಾಗಿದ್ದು, ಇದಕ್ಕೆ ಪ್ಯಾಬ್ ತಂಡ ಸಾಥ್ ನೀಡಿದೆ.
ಇನ್ನು ಈ ವಿಚಾರವನ್ನು ಗೃಹ ಇಲಾಖೆಯ ಕಾರ್ಯದರ್ಶಿ ಡಿ. ರೂಪಾ ಅವರು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಡಿ ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಏನೇ ಕೆಲಸ ಮಾಡಿದರೂ ಅದಕ್ಕೆ ಸಪೋರ್ಟ್ ಮಾಡಿ ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.