ಬೆಂಗಳೂರು:ದೇಶಾದ್ಯಂತ ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಮಾಡಲಾಗಿದೆ. ವೈದ್ಯಕೀಯ ನೆರವು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ನೆರವಾಗಲು ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದೊಂದಿಗೆ ಮಹಿಂದ್ರಾ ಲಾಜೆಸ್ಟಿಕ್ ಕಂಪನಿಯು ಉಚಿತವಾಗಿ ಅಲೈಟ್ ಹೆಸರಿನಲ್ಲಿ ಕ್ಯಾಬ್ ಸರ್ವೀಸ್ ಆರಂಭಿಸಿದೆ.
ತುರ್ತು ಸಂದರ್ಭದಲ್ಲಿ ಚಿಂತೆ ಬೇಡ... ಒಂದು ಕರೆ ಮಾಡಿದ್ರೆ ಮಹಿಂದ್ರಾ ಲಾಜೆಸ್ಟಿಕ್ನಿಂದ ಉಚಿತ ಕ್ಯಾಬ್ ಸೇವೆ! - free cab service by mahindra logistic company
ಕೊರೊನಾ ಭೀತಿ ಹಿನ್ನೆಲೆ ಜನರಿಗೆ ಉಂಟಾಗಿರುವ ಸಂಚಾರ ಸಮಸ್ಯೆ ನೀಗಿಸಲು ಮಹಿಂದ್ರಾ ಲಾಜೆಸ್ಟಿಕ್ ಕಂಪನಿಯಿಂದ ಉಚಿತ ಕ್ಯಾಬ್ ಸೇವೆ ಆರಂಭಿಸಲಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಟ್ರಾಫಿಕ್ ಮುಖ್ಯ ಕಚೇರಿ ಮುಂದೆ ಇಂದು ಅಧಿಕೃತವಾಗಿ ಟ್ರಾಫಿಕ್ ಕಮೀಷನರ್ ಡಾ. ಬಿ.ಆರ್. ರವಿಕಾಂತೇಗೌಡ ಅವರು ಚಾಲನೆ ನೀಡಿದರು.
ವೃದ್ಧರು, ಮಕ್ಕಳು, ಗರ್ಭಿಣಿಯರು ಈ ಸೇವೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದಾಗಿದೆ. ಪ್ರಾಯೋಗಿಕವಾಗಿ ನಗರದಲ್ಲಿ 18 ಕ್ಯಾಬ್ಗಳ ಸೇವೆ ನೀಡಲಾಗುತ್ತಿದೆ. ಅಗತ್ಯವಾದಲ್ಲಿ ಮತ್ತಷ್ಟು ಕ್ಯಾಬ್ಗಳನ್ನು ಹೆಚ್ಚಿಸುವ ಚಿಂತನೆಯಿದೆ. ಈಗಾಗಲೇ ದೆಹಲಿ, ಹೈದರಾಬಾದ್, ಮುಂಬೈ ಸಿಟಿಗಳಲ್ಲಿ ಸೇವೆ ಆರಂಭಿಸಿರುವ ಮಹಿಂದ್ರಾ ಕಂಪನಿಯು 9113577375, ಮತ್ತು 100ಕ್ಕೆ ಕಾಲ್ ಮಾಡಿದ್ರೆ ಕ್ಯಾಬ್ ಸೇವೆ ದೊರೆಯಲಿದೆ.
TAGGED:
ರಾಜ್ಯದಲ್ಲಿ ಕೊರೊನಾ ಸೋಂಕು ತಡೆ