ಬೆಂಗಳೂರು:ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಸೇವೆ ಒದಗಿಸುತ್ತಿರುವ ಅಪೊಲೊ ಆಸ್ಪತ್ರೆ ಉಚಿತ ಆ್ಯಂಬುಲೆನ್ಸ್ ಸೇವೆ ಘೋಷಿಸಿದೆ. ನಗರದ 5 ಕಿಮೀ ವ್ಯಾಪ್ತಿಯಲ್ಲಿ ಈ ಸೇವೆ ಲಭ್ಯವಿದೆ.
ಅಪೊಲೊ ಆಸ್ಪತ್ರೆಯಿಂದ ಬೆಂಗಳೂರು ನಗರದ 5 ಕಿಮೀ ವ್ಯಾಪ್ತಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ - ಅಪೊಲೊ ಆಸ್ಪತ್ರೆಯಿಂದ ನಗರದ 5 ಕಿಮೀ ವ್ಯಾಪ್ತಿಯಲ್ಲಿ ಉಚಿತ ಆಂಬುಲೆನ್ಸ್ ಸೇವೆ
ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರಿನ ಅಪೊಲೊ ಆಸ್ಪತ್ರೆಯಿಂದ ನಗರದ 5 ಕಿಮೀ ವ್ಯಾಪ್ತಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.
ದಿನದ 24 ಗಂಟೆಯಲ್ಲಿ/ ಯಾವಾಗ ಬೇಕಾದರೂ ಸಾರ್ವಜನಿಕರು 1066 ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಆ್ಯಂಬುಲೆನ್ಸ್ ಬರಲಿದೆ. ಹೀಗಾಗಿ, ಅಗತ್ಯವಿರುವವರು ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಆಸ್ಪತ್ರೆ ತಿಳಿಸಿದೆ.
ಅಪೊಲೊ ಹಾಸ್ಟಿಟಲ್ಸ್ ಡೆಡಿಕೇಟೆಡ್ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ(ಇಆರ್‌ಎಸ್) ಪ್ರವೇಶಿಸಲು 1066ಕ್ಕೆ ಕರೆ ಕರೆಮಾಡಬೇಕು. ಸುಧಾರಿತ ಜಿಪಿಆರ್‌ಎಸ್ ಮೂಲಕ ತಕ್ಷಣವೇ ತುರ್ತು ಉಪಕರಣಗಳೊಂದಿಗೆ ತರಬೇತಿ ಪಡೆದ ವೈದ್ಯಾಧಿಕಾರಿಗಳನ್ನು ಒಳಗೊಂಡ ಆ್ಯಂಬುಲೆನ್ಸ್ ವಾಹನ ಬರಲಿದೆ. ತುರ್ತು ಸಂದರ್ಭದಲ್ಲಿ ರೋಗಿಯು ಜೀವನ್ಮರಣದ ವಿರುದ್ಧ ಹೋರಾಟ ಮಾಡುತ್ತಾನೆ. ಹಾಗಾಗಿ, ಈ ಸಮಯದಲ್ಲಿ ಸರಿಯಾಗಿ ಸಾರಿಗೆ ಸೇವೆ, ವೈದ್ಯಕೀಯ ಸೌಲಭ್ಯ ಸಿಕ್ಕರೆ ರೋಗಿಯ ಪ್ರಾಣ ಉಳಿಯಲಿದೆ. ಸಾವು ಮತ್ತು ಅಂಗವಿಕಲತೆ ತಡೆಯಲು ಗೋಲ್ಡನ್ ಅವರ್‌ನಲ್ಲಿ ವೈದ್ಯಕೀಯ ನೆರವು ಪಡೆಯಲು ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.