ಬೆಂಗಳೂರು:ಒಎಲ್ಎಕ್ಸ್ನಲ್ಲಿ ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ. ಕನಕಪುರ ಮೂಲದ ಮಂಜುನಾಥ್ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ನಿರುದ್ಯೋಗಿಗಳನ್ನು ಸಂಪರ್ಕಿಸಿ ಕೆಲಸ ಕೊಡಿಸುವುದಾಗಿ ಹೇಳಿ ದಾಖಲಾತಿಗಳನ್ನು ಪಡೆದುಕೊಳ್ಳುತ್ತಿದ್ದ. ಅದೇ ದಾಖಲಾತಿಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿ ಮಾಡುತ್ತಿದ್ದನಂತೆ.
ಆರೋಪಿಯು ವಂಚನೆ ಕೃತ್ಯಕ್ಕಾಗಿ ಕಡಿಮೆ ಬೆಲೆಗೆ ಮೊಬೈಲ್ ಖರೀದಿಸಿ, ಅದರ ಮೂಲಕ ಒಎಲ್ಎಕ್ಸ್ನಲ್ಲಿ ಕಾರು ಮಾರಾಟಕ್ಕಿಟ್ಟವರನ್ನು ಸಂಪರ್ಕಿಸುತ್ತಿದ್ದ. ತಾನು ಕಾರು, ಬೈಕ್ ಮಾರಾಟ ಮಾಡೋ ಡೀಲರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಸ್ವಲ್ಪ ಮುಂಗಡ ಹಣ ಕೊಟ್ಟು ಜಾಹೀರಾತು ಡಿಲಿಟ್ ಮಾಡಿಸಿ ನಂತರ ಮಾಲೀಕರಿಂದ ದಾಖಲಾತಿ ಮತ್ತು ವಾಹನ ಪಡೆಯುತ್ತಿದ್ದನು. ಆಮೇಲೆ ಹಣ ನೀಡದೇ ಕಡಿಮೆ ಬೆಲೆಗೆ ಮಾರಾಟ ಮಾಡಿ ಎಸ್ಕೇಪ್ ಆಗುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.