ಬೆಂಗಳೂರು: ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರದು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.
ಪೊಲೀಸ್ ಹಿರಿಯಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ವಂಚಕರು! - bangalore cyber crime
ಪೊಲೀಸ್ ಯೂನಿಫಾರ್ಮ್ ಹಾಕಿರುವ ಫೋಟೋವನ್ನು ಪ್ರೊಫೈಲ್ನಲ್ಲಿ ಬಳಕೆ ಮಾಡಿ ಡಿಸಿಪಿ ಶರಣಪ್ಪ ಅವರ ನಕಲಿ ಖಾತೆ ತೆರೆದಿದ್ದಾರೆ. ಖಾತೆಯಲ್ಲಿ ಶರಣಪ್ಪ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬಹಳ ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ರವಾನೆ ಮಾಡಿದ್ದಾರೆ..
ಪೊಲೀಸ್ ಯೂನಿಫಾರ್ಮ್ ಹಾಕಿರುವ ಫೋಟೋವನ್ನು ಪ್ರೊಫೈಲ್ನಲ್ಲಿ ಬಳಕೆ ಮಾಡಿ ನಕಲಿ ಖಾತೆ ತೆರೆದಿದ್ದಾರೆ. ಹಾಗೆ ಖಾತೆಯಲ್ಲಿ ಶರಣಪ್ಪ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬಹಳ ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ರವಾನೆ ಮಾಡಿದ್ದಾರೆ. ಈ ವಿಚಾರ ಡಿಸಿಪಿ ಶರಣಪ್ಪ ಅವರಿಗೆ ತಿಳಿದ ಕೂಡಲೇ ಅಲರ್ಟ್ ಆಗಿ ನಕಲಿ ಖಾತೆ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದು ನನ್ನ ಅಧಿಕೃತ ಅಕೌಂಟ್ ಅಲ್ಲ, ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ. ಯಾರೇ ಈ ನಕಲಿ ಖಾತೆ ಮೂಲಕ ಮೆಸೇಜ್ ಅಥವಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ನಂಬಬೇಡಿ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ, ಐಪಿಎಸ್ ಹಾಗೂ ಎಸಿಪಿ, ಇನ್ಸ್ಪೆಕ್ಟರ್ ಹೆಸರಿನ ನಕಲಿ ಫೇಸ್ಬುಕ್ ಖಾತೆ ತೆರೆದು ಪರಿಚಯಸ್ತರಲ್ಲಿ ಹಣಕ್ಕೆ ಬೇಡಿಕೆ ಇಡ್ತಿದ್ರು. ಇದೀಗ ಮತ್ತೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅಕೌಂಟ್ ಕೂಡ ನಕಲಿ ಕ್ರಿಯೇಟ್ ಆಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.