ಬೆಂಗಳೂರು: ತಾನು ವಾಸವಿದ್ದ ಮನೆಯನ್ನು ಮಾಲೀಕರಿಗೆ ಗೊತ್ತಾಗದಂತೆ ಲೀಸ್ಗೆ ಕೊಟ್ಟು ಹಣ ಸಮೇತ ಪರಾರಿಯಾದ ವ್ಯಕ್ತಿಯ ಸುಳಿವು ಇನ್ನೂ ಕೂಡ ಪತ್ತೆಯಾಗಿಲ್ಲ. ಆದರೆ ಮನೆ ಕಳೆದುಕೊಳ್ಳುವ ಸ್ಥಿತಿಯಲ್ಲಿರೋ ಮಂದಿ ಪ್ರತಿದಿನ ಠಾಣೆ ಮುಂಭಾಗ ಬಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಆರೋಪಿಗಳು ಬೆಂಗಳೂರಿನ ನಾನಾ ಕಡೆ ಇದೇ ರೀತಿ ವಂಚಿಸಿ ರಾಯಲ್ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದ್ರೆ ಆತನಿಂದ ಮೋಸ ಹೋದವರು ಬಾಣಸವಾಡಿ ಪೊಲೀಸ್ ಠಾಣೆಯ ಮುಂಭಾಗ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮನೋಹರ್ ಹಾಗೂ ಆತನ ಪತ್ನಿ ಸೇರಿದಂತೆ ಬ್ರೋಕರ್ ರಂಜನ್ ವಿರುದ್ಧ ದೂರು ನೀಡಿದ್ರೂ ಇಲ್ಲಿಯವರೆಗೆ ಎಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿಲ್ಲ.
ಸದ್ಯ ಈತನಿಂದ ಮೋಸ ಹೋದವರು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 80ಕ್ಕೂ ಅಧಿಕ ಮಂದಿ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿಯಿಂದ ಮನೆ ಲೀಸ್ಗೆ ತೆಗೆದುಕೊಂಡವರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಮನೆ ಮಾಲೀಕರ ಟಾರ್ಚರ್ ಕೂಡ ತಡೆಯೋಕೆ ಆಗುತ್ತಿಲ್ಲ. ಒಂದೇ ಸಮನೆ ಮನೆ ಖಾಲಿ ಮಾಡಿ ಅಂತ ಓನರ್ಗಳು ಹಿಂದೆ ಬಿದ್ದಿದ್ದಾರೆ. ಬ್ಯಾಂಕ್ಗಳಿಂದ ಲೋನ್ ಪಡೆದು ಹಣ ನೀಡಿದ್ದ ಅನೇಕ ಮಂದಿ ಪರಾದಾಟ ನಡೆಸುತ್ತಿದ್ದಾರೆ.