ಬೆಂಗಳೂರು: ವಂಚಕ ಯುವರಾಜ್ನ ವಿಚಾರಣೆ ತೀವ್ರಗೊಳಿಸಿದಷ್ಟು ಒಂದೊಂದೇ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಪ್ರಭಾವಿ ಸಚಿವರನ್ನು ತೋರಿಸಿ ಕಲರ್- ಕಲರ್ ಕಾಗೆ ಹಾರಿಸುತ್ತಿದ್ದ ಯುವರಾಜ್, ಸಚಿವರ ಹೆಸರಿನ ಲೆಟರ್ ಹೆಡ್‌ಗಳನ್ನು ಫೋರ್ಜರಿ ಮಾಡುತ್ತಿದ್ದನೆಂಬ ಅನುಮಾನ ಸದ್ಯ ಸಿಸಿಬಿಯನ್ನು ಕಾಡುತ್ತಿದೆ.
ಸಿಸಿಬಿಯಿಂದ ಬಂಧಿತನಾಗಿರುವ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯನ್ನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಡಿಸೆಂಬರ್ 16 ರಂದು ನಾಗರಭಾವಿಯ ಯುವರಾಜ್ ನಿವಾಸದ ಮೇಲೆ ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದ ತಂಡ ದಾಳಿ ಮಾಡಿತ್ತು. ದಾಳಿ ವೇಳೆ ಯುವರಾಜ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು, ಚಿನ್ನಾಭರಣ ಪತ್ತೆಯಾಗಿತ್ತು.
ಯುವರಾಜ್ ಮೊಬೈಲ್‌ನ ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ. ಯುವರಾಜ್ ಮೊಬೈಲ್ನಲ್ಲಿ ಪ್ರಭಾವಿ ರಾಜಕಾರಣಿಗಳು ಸೇರಿದಂತೆ ರಾಜ್ಯದ ಕೆಲ ಸಚಿವರ ಮೊಬೈಲ್ ನಂಬರ್ಗಳು ಹಾಗೂ ಆತನ ಮೊಬೈಲ್ ಗ್ಯಾಲರಿಯಲ್ಲಿ ನೂರಕ್ಕೂ ಹೆಚ್ಚು ಮಾಡೆಲ್ಗಳ ಫೋಟೋಗಳು ಪತ್ತೆಯಾಗಿದ್ವು.
ವಂಚನೆ ಕೇಸ್ನಲ್ಲಿ ಸಿಸಿಬಿಯಿಂದ ಯುವರಾಜ್ ಅರೆಸ್ಟ್ ಆಗ್ತಿದ್ದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಸಿಸಿಬಿಯಲ್ಲಿ ಹಲವು ವಂಚನೆ ಕೇಸ್ಗಳು ರಿಜಿಸ್ಟರ್ ಆಗಿದ್ವು. ಯುವರಾಜ್ ಮೊಬೈಲ್ ಪರಿಶೀಲಿಸಿದಾಗ ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ, ಸಿ ಪಿ ಯೋಗೇಶ್ವರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ವು. ಸದ್ಯ ಯುವರಾಜ್ ಮನೆಯಲ್ಲಿ ಸಚಿವರ ಹೆಸರಿನ ಲೆಟರ್ ಹೆಡ್ಗಳು ಪತ್ತೆಯಾಗಿವೆ ಎಂಬ ಸ್ಫೋಟಕ ವಿಚಾರ ಹೊರ ಬಿದ್ದಿದೆ.