ಕರ್ನಾಟಕ

karnataka

ETV Bharat / state

ಕೆನಡಾ ಆಸ್ಪತ್ರೆಯಲ್ಲಿ ಹುದ್ದೆ ಆಮಿಷವೊಡ್ಡಿ ದೋಖಾ: ಬೆಂಗಳೂರಿನ ಮಹಿಳೆಗೆ 18 ಲಕ್ಷ ರೂ. ವಂಚನೆ - ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ

ಕೆನಡಾದ ಆಸ್ಪತ್ರೆಯಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬೆಂಗಳೂರಿನ ಸೈಬರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

fraud-woman-in-the-name-of-job-in-bengaluru
ಕೆನಡಾದ ಆಸ್ಪತ್ರೆಯಲ್ಲಿ ಹುದ್ದೆ ಆಮಿಷವೊಡ್ಡಿ ದೋಖಾ: ಬೆಂಗಳೂರಿನ ಮಹಿಳೆಗೆ 18 ಲಕ್ಷ ರೂ. ವಂಚನೆ

By

Published : Sep 13, 2021, 7:29 AM IST

ಬೆಂಗಳೂರು:ಕೆನಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ಸೈಬರ್ ಖದೀಮನೊಬ್ಬ ಮಹಿಳೆಯೊಬ್ಬರಿಗೆ 18.41 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ರಾಜಾಜಿನಗರದ 44 ವರ್ಷದ ಮಹಿಳೆ ವಂಚನೆಗೊಳಗಾದವರು.

ಸೈಬರ್ ಖದೀಮ ಮಹಿಳೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಬಳಿಕ ಅವರ ಮೊಬೈಲ್ ಸಂಖ್ಯೆ ಪಡೆದು ಚಾಟ್ ನಡೆಸಿದ್ದಾನೆ. ವಾಟ್ಸ್​ಆ್ಯಪ್‍ನಲ್ಲಿ ಚಾಟ್ ಮಾಡುವ ವೇಳೆ ಉತ್ತಮ ಸಂಬಳವಿರುವ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಬಳಿಕ ಕೆನಡಾದ ಟೊರಾಂಟೊ ಜನರಲ್ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರ ಹುದ್ದೆ ಖಾಲಿ ಇದ್ದು, ಕೈ ತುಂಬಾ ಸಂಬಳ ಸಿಗಲಿದೆ. ಬಯಸಿದರೆ ಹುದ್ದೆ ಕೊಡಿಸುವುದಾಗಿ ತಿಳಿಸಿದ್ದ.

ವಂಚಕನ ಮಾತನ್ನು ನಂಬಿದ ಮಹಿಳೆ ಹುದ್ದೆಗೆ ಸೇರುವುದಾಗಿ ಒಪ್ಪಿದ್ದಾಳೆ. ಬಳಿಕ ವೀಸಾ ಅಪ್ಲೀಕೇಷನ್ ಶುಲ್ಕ, ಪೊಲೀಸ್ ಪರಿಶೀಲನಾ ಪ್ರಮಾಣಪತ್ರ, ಮೆಡಿಕಲ್ ಸರ್ಟಿಫಿಕೆಟ್, ವಿಮಾ ಪಾಲಿಸಿ, ಬಯೋಮೆಟ್ರಿಕ್ ಎಂದು ನಾನಾ ಕಾರಣ ಹೇಳಿ ಹಂತ ಹಂತವಾಗಿ 18.41 ಲಕ್ಷ ರೂ. ವಸೂಲಿ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಮತ್ತೆ ಹಣ ಕೇಳಿದಾಗ ಅನುಮಾನ:

ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದ ಮಹಿಳೆ ಈಗಾಗಲೇ ನೀಡಿರುವ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಕೊನೆಗೆ ಸೈಬರ್ ವಂಚಕ ಮೊಬೈಲ್ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ ಉತ್ತರ ವಿಭಾಗದ ಸಿಇಎನ್ (ಸೈಬರ್ ಪೊಲೀಸ್) ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ಮೋಸ ಮಾಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು, ಇಂತಹ ಹಲವು ಪ್ರಕರಣಗಳು ನಗರದ ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಫೈನಲ್​​​​​​​ನಲ್ಲಿ ವಿಶ್ವನಂಬರ್​ 1 ಜಾಕೊವಿಕ್​ಗೆ ಆಘಾತಕಾರಿ ಸೋಲು..ಮೆಡ್ವೆಡೆವ್​ಗೆ ಭರ್ಜರಿ ಜಯ

ABOUT THE AUTHOR

...view details