ಬೆಂಗಳೂರು: ಫುಡ್ ಆರ್ಡರ್ ಮಾಡೋ ನೆಪದಲ್ಲಿ ಬಂದು ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈಚೆಗೆ ಸಿಲಿಕಾನ್ ಸಿಟಿಯಲ್ಲಿನ ಪ್ರತಿಷ್ಠಿತ ಬೇಕರಿಗಳನ್ನು ಟಾರ್ಗೆಟ್ ಮಾಡಿರುವ ವಂಚಕರು ಅಂಗಡಿಗೆ ತೆರಳಿ ಹೈಕೋರ್ಟ್ ಜಡ್ಜ್ ಸಂಬಂಧಿಕ ಎಂದು ಹೇಳಿಕೊಂಡು ಹಣ ದೋಚಿದ್ದಾನೆ.
ನಿಮ್ಮ ಬಳಿ ಇಂಥವರೂ ಬರಬಹುದು... ಅಂಗಡಿ ಮಾಲೀಕರೇ ಹುಷಾರ್! - kannada news
ಫುಡ್ ಆರ್ಡರ್ ಮಾಡೋ ನೆಪದಲ್ಲಿ ಬಂದು ಹಣ ವಸೂಲಿ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈಚೆಗೆ ಸಿಲಿಕಾನ್ ಸಿಟಿಯಲ್ಲಿನ ಪ್ರತಿಷ್ಠಿತ ಬೇಕರಿಗಳನ್ನು ಟಾರ್ಗೆಟ್ ಮಾಡಿರುವ ವಂಚಕರು ಅಂಗಡಿಗೆ ತೆರಳಿ ಹೈಕೋರ್ಟ್ ಜಡ್ಜ್ ಸಂಬಂಧಿಕ ಎಂದು ಹೇಳಿಕೊಂಡು ಹಣ ದೋಚಿದ್ದಾನೆ.
ಫುಡ್ ಆರ್ಡರ್ ಮಾಡಿ ನಂತರ ಡೆಲಿವರಿ ಮಾಡುವ ವಿಳಾಸ ತೋರಿಸುವುದಾಗಿ ಕರೆದೊಯ್ದಿದ್ದಾನೆ. ಅಂಗಡಿಯವರು ಆರ್ಡರ್ ತೆಗೆದುಕೊಂಡು ಆತ ಹೇಳಿದ ಅಪಾರ್ಟ್ಮೆಂಟ್ಗೆ ಡೆಲಿವರಿ ಮಾಡಿದ್ದಾರೆ.
ನಂತರ ಇಲ್ಲಿ ಹಣ ಸಿಗುತ್ತಿಲ್ಲ. ತುರ್ತಾಗಿ ಹಣ ಬೇಕಾಗಿದೆ ಎಂದು ಹಣ ಕೇಳಿದ್ದಾನೆ. ನಂಬಿಕೆಯ ಗ್ರಾಹಕ ಎಂದು ನಂಬಿದ್ದ ಅಂಗಡಿಯವರು ಹಣ ನೀಡಿದ್ದಾರೆ. ಆದರೆ, ಏಕಾಏಕಿ ಹಣ ತೆಗೆದುಕೊಂಡ ನಂತರ ಎಟಿಎಂನಲ್ಲಿ ಹಣ ತರುತ್ತೇನೆ ಎಂದು ಹೋದ ವ್ಯಕ್ತಿ ಬಳಿಕ ಎಷ್ಟು ಕಾದರೂ ಬಾರದೆ ಹೋಗಿದ್ದಾನೆ.ಇನ್ನು ಈ ರೀತಿ ಹಲವಾರು ಅಂಗಡಿಗಳಿಗೆ ಮೋಸವಾಗಿದ್ದು, ನೊಂದವರು ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರ ಮೊರೆ ಹೋಗಿದ್ದಾರೆ.