ಬೆಂಗಳೂರು: ರೈಲ್ವೆ ಇಲಾಖೆ ಹಾಗು ಸಿಆರ್ಪಿಎಫ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿವೃತ್ತ ಯೋಧನಿಗೆ ವಂಚನೆ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಗೋಪಾಲ್ ಎಂಬ ನಿವೃತ್ತ ಯೋಧ ಸೇರಿ 9 ಜನರಿಗೆ ಸುಮಾರು 28 ಲಕ್ಷ ರೂಪಾಯಿವರೆಗೂ ವಂಚನೆಯಾಗಿದೆ. ತನಗೆ ಕೇಂದ್ರ ಹಾಗು ರಾಜ್ಯ ಸಚಿವರು ಆಪ್ತರು. ಅವರಿಂದ ನೇರವಾಗಿ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ಆರೋಪಿ ವಂಚಿಸಿದ್ದಾನೆ ಎನ್ನಲಾಗ್ತಿದೆ.
ಗೋಪಾಲ್ ಅವರು ಸೇನೆಯಿಂದ ನಿವೃತ್ತರಾದ ಬಳಿಕ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನ್ ಟ್ರೈನಿಂಗ್ ಮ್ಯಾನೇಜರ್ ಆಗಿದ್ದ ವೇಳೆ ಶ್ರೇಯಾಂಶ್ ಬೋಗಾರ್ ಎಂಬಾತ ಪರಿಚಯವಾಗಿದ್ದ. ನಂತರ ತನಗೆ ಗಣ್ಯರು, ಪ್ರಭಾವಿಗಳ ಪರಿಚಯವಿದೆ. ಅವರಿಂದಲೇ ಕೆಲಸ ಕೊಡಿಸುತ್ತೇನೆ. ಆದ್ರೆ ಪೋಸ್ಟಿಂಗ್ಗೆ 9 ಲಕ್ಷ ರೂಪಾಯಿ ಖರ್ಚಾಗುತ್ತೆ ಎಂದು ಹೇಳಿದ್ದನಂತೆ. ಇದನ್ನು ನಂಬಿದ ಗೋಪಾಲ್ ಅವರು ತನ್ನ ಸ್ನೇಹಿತರಿಗೂ ಕೆಲಸ ಸಿಗಲಿ ಎಂಬ ಕಾರಣಕ್ಕೆ ಅವರಿಗೂ ಶ್ರೇಯಸ್ ಬೋಗಾರ್ನನ್ನು ಪರಿಚಯ ಮಾಡಿಸಿದ್ರು.