ಬೆಂಗಳೂರು: ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮೆಡಿಕಲ್ ಸೀಟ್ ಮಾತ್ರವಲ್ಲದೇ ತನ್ನ ಗುರುತು ಪತ್ತೆಯಾಗದ ಎರಡೆರಡು ಆಧಾರ್ ಕಾರ್ಡ್ ಕ್ರಿಯೇಟ್ ಮಾಡಿ ದೊಡ್ಡ ಫ್ರಾಡ್ ನಡೆಸಿದ್ದಾನೆ.
ಮೆಡಿಕಲ್, ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ವಂಚನೆ: ಆರೋಪಿ ಅರೆಸ್ಟ್ - ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್
ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
![ಮೆಡಿಕಲ್, ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ವಂಚನೆ: ಆರೋಪಿ ಅರೆಸ್ಟ್ CCB Additional Commissioner Sandeep Patil](https://etvbharatimages.akamaized.net/etvbharat/prod-images/768-512-6115662-thumbnail-3x2-smk.jpg)
ಶೈಲೇಶ್ ಕೋಥಾರಿ ಅಲಿಯಾಸ್ ಗೌರೇಶ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಈ ಆರೋಪಿ ಮೊದಲು ಪತ್ರಿಕೆಯಲ್ಲಿ ಜಾಹೀರಾತು ಹಾಕಿ ಸೀಟ್ ಕೊಡಿಸುವುದಾಗಿ ನಂಬಿಸಿದ್ದ. ಇದನ್ನು ನೋಡಿದ ಬೂಬೇಶ್ ಭಾರತಿ ಅನ್ನೋರು ಮೆಡಿಕಲ್ ಅಥವಾ ಎಂಜಿನಿಯರಿಂಗ್ ಸೀಟ್ ಆಸೆಯಿಂದ ಆರೋಪಿಯನ್ನು ಸಂಪರ್ಕ ಮಾಡಿದ್ದಾರೆ. ಈ ವೇಳೆ ಚೆನ್ನೈನ ಭಾರತ್ ಯುನಿವರ್ಸಿಟಿಯಲ್ಲಿ ಬಿಟೆಕ್ ಎಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ತಿಳಿಸಿ, ಲಕ್ಷ ಹಣ ಪಡೆದಿದ್ದಾನೆ. ನಂತರ ಯಾವುದೇ ರೀತಿ ಸೀಟು ಕೊಡಿಸದೇ ಮೋಸ ಮಾಡಿದ್ದಾನೆ ಎನ್ನಲಾಗಿದೆ. ನಂತರದಲ್ಲಿ ಮೋಸ ಹೋದ ಮಹಿಳೆಯು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಯು ಕೋಲ್ಕತ್ತಾ ಮೂಲದವನಾಗಿದ್ದು, ಬೆಂಗಳೂರಿಗೆ ಬಂದು ಈ ರೀತಿ ಕೃತ್ಯವೆಸಗಿ ಫ್ಲೈಟ್ನಲ್ಲಿ ಎಸ್ಕೇಪ್ ಆಗ್ತಿದ್ದ. ಹಾಗೆಯೇ ಆರೋಪಿಯು ಎರಡು ಆಧಾರ್ ಕಾರ್ಡ್ ಹೊಂದಿದ್ದು, ಎರಡೂ ಆಧಾರ್ ಕಾರ್ಡ್ನಲ್ಲಿ ಒಂದೇ ಸಂಖ್ಯೆ ಇದೆ. ವಿಳಾಸ ಮಾತ್ರ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನ ಬಂದಿದ್ದು, ತನಿಖೆ ಮುಂದುವರೆಸಿದ್ದಾರೆ.