ಕರ್ನಾಟಕ

karnataka

ETV Bharat / state

ಟಾಸ್ಕ್​ ಗೆದ್ರೆ ಕಮಿಷನ್ ಸಿಗುತ್ತೆಂದು ನಂಬಿಸಿ ವಂಚನೆ..ಸೈಬರ್​ ಠಾಣೆಯಲ್ಲಿ ಅಪರಿಚಿತರ ವಿರುದ್ಧ FIR

ಆನ್​​ಲೈನ್ ಟಾಸ್ಕ್​ನಲ್ಲಿ ಗೆದ್ದರೆ ಕಮಿಷನ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

fraud
fraud

By

Published : Sep 13, 2021, 9:50 AM IST

ಬೆಂಗಳೂರು:ಆನ್​ಲೈನ್ ಟಾಸ್ಕ್ ಗೆದ್ದವರಿಗೆ ಕಮಿಷನ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಸೂಲಿ ಮಾಡಿ ವಂಚಿಸಿರುವ ಸಂಬಂಧ ವೈಟ್‍ಫೀಲ್ಡ್ ಸಿಇಎನ್( ಸೈಬರ್)ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ವರ್ತೂರಿನ 23 ವರ್ಷದ ಈ ಮೋಸದ ಜಾಲಕ್ಕೆ ಸಿಲುಕಿದ್ದಾನೆ. ಈತನ ಮೊಬೈಲ್​ಗೆ ಮೆಸೇಜ್​ನಲ್ಲಿ ಲಿಂಕ್ ಬಂದಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅಪರಿಚಿತ ವ್ಯಕ್ತಿ, ವಾಟ್ಸ್​ಆ್ಯಪ್​ಗೆ ಅಮೆಜಾನ್​ ಆ್ಯಪ್​ ಡೌನ್​ಲೋಡ್ ಲಿಂಕ್ ಸೆಂಡ್ ಮಾಡಿದ್ದ. ಈ ಆ್ಯಪ್ ಡೌನ್​ಲೋಡ್ ಮಾಡಿ ನೋಂದಾಯಿಸಿಕೊಂಡ ಬಳಿಕ ಕೆಲ ಟಾಸ್ಕ್ ನೀಡಲಾಗುವುದು. ಟಾಸ್ಕ್​ನಲ್ಲಿ ಗೆದ್ದರೆ ನಿಮಗೆ ಕಮಿಷನ್​ ಬರಲಿದೆ. ಅದಕ್ಕೂ ಮುನ್ನ ಲಾಗಿನ್ ಆಗಲು ಹಣ ಪಾವತಿಸಬೇಕೆಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಇದನ್ನು ನಂಬಿದ ಯುವಕ ಒಂದು ಲಕ್ಷ ರೂ. ಟ್ರಾನ್ಸ್​ಫರ್​ ಮಾಡಿದ್ದಾನೆ.

ಬಳಿಕ ಯುವಕನಿಗೆ ಅನೇಕ ಟಾಸ್ಕ್ ಕೊಟ್ಟಿದ್ದು, ಎಲ್ಲವನ್ನೂ ಆತ ಪಾಸ್ ಮಾಡಿದ್ದ. ಟಾಸ್ಕ್​ ಗೆದ್ದ ಮೇಲೂ ಯುವಕನಿಗೆ ಕಮಿಷನ್ ಹಣ ಬಂದಿರಲಿಲ್ಲ. ಹೀಗಾಗಿ, ಕೇಳಲೆಂದು ಟಾಸ್ಕ್ ನೀಡಿದವನಿಗೆ ಯುವಕ ಕರೆ ಮಾಡಿದ್ದಾನೆ. ಆದರೆ, ಸೈಬರ್ ಖದೀಮನ ಮೊಬೈಲ್ ಸ್ವಿಚ್ಡ್​​ ಆಫ್ ಆಗಿದೆ.

ಮತ್ತೊಂದು ಪ್ರಕರಣ:

ಇದೇ ಮಾದರಿಯ ಮತ್ತೊಂದು ಪ್ರಕರಣ ವೈಟ್​ಫೀಲ್ಡ್​ನ ಇಮ್ಮಡಿಹಳ್ಳಿಯಲ್ಲಿ ನಡೆದಿದೆ. 20 ವರ್ಷದ ಯುವಕನಿಗೆ ಅರೆಕಾಲಿಕ ನೌಕರಿ ನೀಡಲಾಗುವುದು. ಅದಕ್ಕೂ ಮುನ್ನ ಅಮೆಜಾನ್​ ಆ್ಯಪ್​ ಡೌನ್​ ಮಾಡಬೇಕು ಎಂದಿದ್ದಾರೆ. ಅದನ್ನು ನಂಬಿದ ಯುವಕ ಆ್ಯಪ್ ಡೌನ್​ಲೋಡ್ ಮಾಡಿದ್ದು, ಕಿಡಿಗೇಡಿಗಳು 1 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಈ ಕುರಿತು ಸೈಬರ್​ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೆನಡಾ ಆಸ್ಪತ್ರೆಯಲ್ಲಿ ಹುದ್ದೆ ಆಮಿಷವೊಡ್ಡಿ ದೋಖಾ: ಬೆಂಗಳೂರಿನ ಮಹಿಳೆಗೆ 18 ಲಕ್ಷ ರೂ. ವಂಚನೆ

ಕಿಡಿಗೇಡಿಗಳು ಇದೇ ರೀತಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ.

ABOUT THE AUTHOR

...view details