ಬೆಂಗಳೂರು:ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್, ಟ್ರಾವೆಲ್ ಪ್ಯಾಕೇಜಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಕೊಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ 12.59 ಲಕ್ಷ ರೂ. ವಂಚಿಸಿದ ಆರೋಪಿ ತಲೆಮರೆಸಿಕೊಂಡಿದ್ದಾನೆ.
ವಂಚನೆಗೊಳಗಾದ ಯಲಹಂಕದ ನಿವಾಸಿ ಮಲ್ಲೇಶ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪ್ರಮೋದ್ ವಿರುದ್ಧ ಯಲಹಂಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮಲ್ಲೇಶ್ ಖಾಸಗಿ ಕಂಪನಿ ನೌಕರನಾಗಿದ್ದು, ಕೆಲ ವರ್ಷಗಳ ಹಿಂದೆ ಇವರಿಗೆ ಆರೋಪಿ ಪ್ರಮೋದ್ ಪರಿಚಯವಾಗಿತ್ತು. ಆಗ ತಾನು ಎಂಟರ್ ಪ್ರೈಸಸ್ ಹೆಸರಿನ ಟ್ರಾವೆಲ್ ಕಚೇರಿ ನಡೆಸುತ್ತಿದ್ದು, ವಿದೇಶಿ ಹಣ ವಿನಿಮಯ, ವಿಮಾನದ ಟಿಕೆಟ್ ಮಾರಾಟ, ಟ್ರಾವೆಲ್ ಪ್ಯಾಕೇಜಿಂಗ್ ಮಾಡಿಕೊಂಡಿದ್ದೇನೆ. ಇದರಲ್ಲಿ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ರೂ. ಲಾಭಾಂಶ ಪಡೆದುಕೊಳ್ಳಬಹುದು ಎಂದು ನಂಬಿಸಿ ಆತನಿಂದ 1.32 ಲಕ್ಷ ರೂ. ಪಡೆದುಕೊಂಡಿದ್ದ.