ಬೆಂಗಳೂರು: ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷನ ಹೆಸರಿನಲ್ಲಿ ಮಹಿಳೆಗೆ ವಂಚಿಸಿದ್ದ ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಲ್ಕತ್ತಾ ಮೂಲದ ಮಹಿಳೆಯನ್ನ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಬಳಿಕ ಹಣ ಪಡೆದು ವಂಚಿಸಿರುವ ಆರೋಪದಡಿ ಜಿ.ಕೆ.ಗೌಡ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.
ಲೈವ್ ಬ್ಯಾಂಡ್ನಲ್ಲಿ ಕೆಲಸ ಮಾಡಿಕೊಂಡಿದ್ದ ಕೋಲ್ಕತ್ತಾ ಮೂಲದ ಮಹಿಳೆಗೆ ಪರಿಚಯವಾಗಿದ್ದ ಆರೋಪಿಯು ತಾನು ಉತ್ತರ ಕನ್ನಡದ ಜಿಲ್ಲೆಯ ಜೆಡಿಎಸ್ ಮುಖಂಡ ಅಂತಾ ಹೇಳಿಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ 8 ವರ್ಷದಿಂದ ಜೊತೆಗಿದ್ದ ಆರೋಪಿ ಜಿ.ಕೆ.ಗೌಡ, ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಜೊತೆಗೆ ನನ್ನ ಬಳಿಯಿದ್ದ 20 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ನನ್ನನ್ನು ನಿರ್ಲಕ್ಷಿಸುತ್ತಿರುವ ಆರೋಪಿ, ಆತನ ರೂಮ್ಮೇಟ್ಗಳಿಗೆ ನನ್ನ ನಂಬರ್ ನೀಡಿದ್ದಾನೆ. ಬಳಿಕ ಅವರಿಂದ ಕರೆ ಮಾಡಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್