ಬೆಂಗಳೂರು: ಕೆಲಸ ಕೊಡಿಸುವುದಾಗಿ ಸಂದರ್ಶನ ನಡೆಸಿ, ಪ್ರತಿಷ್ಠಿತ ಐಬಿಎಂ ಕಂಪನಿ ನಕಲಿ ಆಫರ್ ಲೇಟರ್ ನೀಡಿ ಉದ್ಯೋಗಾಂಕ್ಷಿಗಳಿಂದ ಲಕ್ಷಾಂತರ ರೂ.ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಪುಣೆ ಮೂಲದ ಸಂಜೀವ್ ಗಂಗರಾಮ್ ಗೋರ್ಖಾ ಬಂಧಿತ ಆರೋಪಿ. ಈತ ಒಎಲ್ಎಕ್ಸ್ ನಲ್ಲಿ ಐಬಿಎಂ ಕಂಪನಿಯಲ್ಲಿ ಕೆಲಸ ಖಾಲಿಯಿದೆ. ಆಸಕ್ತ ಅರ್ಹ ಅರ್ಭ್ಯರ್ಥಿಗಳು ಸಂಪರ್ಕಿಸಿ ಎಂದು ಪೋಸ್ಟ್ ಹಾಕುತ್ತಿದ್ದ. ಪೋಸ್ಟ್ ನೋಡಿ ನಂಬುತ್ತಿದ್ದ ಆಭ್ಯರ್ಥಿಗಳು ತಮ್ಮ ಪ್ರೊಫೈಲ್ ಕಳುಹಿಸುತ್ತಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಳಿಕ ಫೋನ್ ನಂಬರ್ ಪಡೆದು ಆನ್ಲೈನ್ನಲ್ಲಿ ಸಂದರ್ಶನ ನಡೆಸುತ್ತಿದ್ದ. ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹಣ ಖರ್ಚಾಗಲಿದೆ ಎಂದು ಹೇಳಿ ನಿರುದ್ಯೋಗಿಗಳಿಂದ ಸಾವಿರಾರು ರೂ. ಪಡೆಯುತ್ತಿದ್ದ. ಬಳಿಕ ಐಬಿಎಂ ಕಂಪನಿಯ ಹೆಸರಿನ ನಕಲಿ ಲೋಗೊ, ಆಫರ್ ಲೇಟರ್ ಕಳುಹಿಸಿ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಐಬಿಎಂ ಕಂಪನಿಯ ಹೆಚ್ಆರ್(HR) ಪ್ರದೀಪ್ ನನ್ನು ಸಂಪರ್ಕಿಸಿ ಎಂದು ಹೇಳಿ ಬಳಿಕ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ವಂಚಿಸುತ್ತಿದ್ದ ಎನ್ನಲಾಗ್ತಿದೆ.
ಇತ್ತ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಅಭ್ಯರ್ಥಿಗಳು ಐಬಿಎಂ ಕಂಪನಿಗೆ ಹೋಗಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ವಿಚಾರಣೆಗೊಳಪಡಿಸಿದಾಗ ಆರೋಪಿ ಈವರೆಗೆ 40ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕಾಣೆಯಾಗಿದ್ದ ಬಸ್ ಮಾಲೀಕ ಶವವಾಗಿ ಪತ್ತೆ: ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ