ಕರ್ನಾಟಕ

karnataka

ETV Bharat / state

ಸಚಿವ ಜಾರ್ಜ್​ ಜೊತೆ ತೆಗೆಸಿಕೊಂಡಿದ್ದ ಪೋಟೋ ತೋರಿಸಿ ವಂಚನೆ: ಆರೋಪಿ ಅರೆಸ್ಟ್ - ಕೆ.ಜೆ ಜಾರ್ಜ್

ನನಗೆ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು ಎಂದು ನಂಬಿಸಿ ಅಮಾಯಕರೊಬ್ಬರಿಗೆ 50 ಸಾವಿರಕ್ಕೆ ಆರೋಪಿ ಡಿಮ್ಯಾಂಡ್ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ

By

Published : Jun 8, 2019, 5:20 PM IST

ಬೆಂಗಳೂರು:ಸಚಿವ ಕೆ.ಜೆ.ಜಾರ್ಜ್ ಜೊತೆಗೆ ತೆಗೆಸಿಕೊಂಡಿದ್ದ ಪೋಟೋಗಳನ್ನು ತೋರಿಸಿ ಅಮಾಯಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಧಾಕರ್ ಕಣ್ಣನ್ ಎಂಬಾತನೇ ವಂಚಕನಾಗಿದ್ದು, ಸಚಿವರೊಂದಿಗೆ ಈ ಹಿಂದೆ ಸಮಾರಂಭವೊಂದರಲ್ಲಿ ತೆಗೆಸಿಕೊಂಡಿದ್ದ ಪೋಟೋಗಳನ್ನು ನಾಗರಾಜ್ ಎಂಬಾತನಿಗೆ ತೋರಿಸಿ ನಿಮ್ಮ ಮಗನಿಗೆ ಕ್ರಿಶ್ಚಿಯನ್ ಮಿಷನರಿ ಕಾಲೇಜಲ್ಲಿ ಡೊನೇಷನ್ ಇಲ್ಲದೇ ಸೀಟು ಕೊಡಿಸ್ತೀನಿ. ನನಗೆ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು ಎಂದು ನಂಬಿಸಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾನೆ‌.

ಸೀಟು ಕೊಡಿಸದೆ ಇದ್ದಾಗ, ನಿಮ್ಮ ಮಗನ ಸೀಟಿಗಾಗಿ ನಾನು ಸಾಕಷ್ಟು ಓಡಾಡಿದ್ದೇನೆ. ಕನಿಷ್ಠ 25,000 ರೂ. ನೀಡಿ ಎಂದಿದ್ದಾನೆ‌. ಕೊಡಲು ನಿರಾಕರಿಸಿದಾಗ ಮನೆಗೆ ಬಂದು 26 ಗ್ರಾಂ ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾನೆ‌ ಎಂದು ಆರೋಪಿಸಿರುವ ನಾಗರಾಜ್, ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಹಳೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಯಲಿಗೆ ಬಂದಿದೆ.

ABOUT THE AUTHOR

...view details