ಕರ್ನಾಟಕ

karnataka

ETV Bharat / state

ಬೆಂಗಳೂರಿನ ನಾಲ್ಕು ಪೊಲೀಸ್ ಠಾಣೆಗಳು ಸೀಲ್​​​ಡೌನ್..! - police stations sealed down

ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ಸೋಂಕು ತಗುಲುತ್ತಿದ್ದು, ಇಂದು ಬೆಂಗಳೂರಿನ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್​​ಡೌನ್ ಮಾಡಲಾಗಿದೆ.

Four police stations sealed down in Bangalore
ಬೆಂಗಳೂರಿನ ನಾಲ್ಕು ಪೊಲೀಸ್ ಠಾಣೆಗಳು ಸೀಲ್​​​ಡೌನ್.

By

Published : Jul 3, 2020, 7:15 PM IST

ಬೆಂಗಳೂರು: ನಗರ ಪೊಲೀಸ್ ಇಲಾಖೆಯ ಸಿಬ್ಬಂದಿಯಲ್ಲಿ ದಿನೇ ದಿನೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಕೊರೊನಾ ಆರ್ಭಟಕ್ಕೆ ಯಲಹಂಕ ನ್ಯೂಟನ್, ಬಾಗಲೂರು, ಜೆ.ಸಿ. ನಗರ ಹಾಗೂ ಸಂಜಯನಗರ ಪೊಲೀಸ್ ಠಾಣೆಗಳನ್ನು ಸೀಲ್​​ಡೌನ್ ಮಾಡಲಾಗಿದೆ.

ಯಲಹಂಕ ನ್ಯೂಟನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​​ಗೆ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ, ಸಿಬ್ಬಂದಿಯನ್ನು ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್​​ಗೆ ಒಳಪಡಿಸಿ ಠಾಣೆಯನ್ನುಸೀಲ್​​ಡೌನ್ ಮಾಡಿದ್ದಾರೆ.

ಬಾಗಲೂರು ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢ ಹಿನ್ನೆಲೆಯಲ್ಲಿ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ಠಾಣೆಯನ್ನು ಪೂರ್ತಿ ಸ್ಯಾನಿಟೈಸ್ ಮಾಡಿ ತಾತ್ಕಾಲಿಕವಾಗಿ ಸೀಲ್​​​ಡೌನ್ ಮಾಡಲಾಗಿದೆ.

ಜೆ.ಸಿ. ನಗರ ಪೊಲೀಸ್ ಠಾಣೆ ಎಎಸ್ಐಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ, ಪೊಲೀಸ್ ಠಾಣೆಯನ್ನು ಸೀಲ್​​ಡೌನ್ ಮಾಡಲಾಗಿದೆ. ಸೋಂಕಿತ ಎಎಸ್ಐ ರಜೆ ಮೇಲೆ ತೆರಳಿ ಮತ್ತೆ ಕರ್ತವ್ಯಕ್ಕೆ ಮರಳಿದಾಗ, ಸ್ವ್ಯಾಬ್ ಟೆಸ್ಟ್​​ಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿತ್ತು‌.

ಅದೇ ರೀತಿ ಸಂಜಯನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ. ಸದ್ಯ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್​​ಡೌನ್ ಮಾಡಿ 40 ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್​​​ನಲ್ಲಿರುವಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.‌ ನಗರದಲ್ಲಿ‌‌ ಇದುವರೆಗೂ 150ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 6 ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details