ಕರ್ನಾಟಕ

karnataka

ETV Bharat / state

ಸ್ವ್ಯಾಬ್ ಟೆಸ್ಟ್ ಮೂಲಕ ಅಕ್ರಮ ಹಣ ಸಂಗ್ರಹ: ನಾಲ್ವರು ಲ್ಯಾಬ್ ಟೆಕ್ನಿಷಿಯನ್ಸ್‌ ಬಂಧನ

ಖಾಸಗಿ ಲ್ಯಾಬ್​ನಲ್ಲಿ ಸಂಗ್ರಹಿಸುತ್ತಿದ್ದ ಸ್ವ್ಯಾಬ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ಹಣ ಪಡೆಯುತ್ತಿದ್ದ ನಾಲ್ವರು ಲ್ಯಾಬ್ ಟೆಕ್ನಿಷಿಯನ್​​​ಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ‌.

four lab technician arrested
ಬಂಧಿತ ಆರೋಪಿಗಳು

By

Published : May 7, 2021, 11:59 AM IST

ಬೆಂಗಳೂರು: ಖಾಸಗಿ ಲ್ಯಾಬ್​ನಿಂದ ಸಂಗ್ರಹಿಸಿದ ಸ್ವ್ಯಾಬ್​​​ ಟೆಸ್ಟ್ ಅನ್ನು ಸರ್ಕಾರದ ಲೆಕ್ಕದಲ್ಲಿ ಅಕ್ರಮವಾಗಿ ಪರೀಕ್ಷೆ ಮಾಡಿ ವರದಿ ನೀಡಲು ಹಣ ಪಡೆಯುತ್ತಿದ್ದ ನಾಲ್ವರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ‌.

ಯಲಹಂಕ ಸರ್ಕಾರಿ ಅಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್​​​ಗಳಾದ ಪದ್ಮನಾಭ, ಭಾವಿರೆಡ್ಡಿ, ಪುನೀತ್ ಹಾಗೂ ಖಾಸಗಿ ಲ್ಯಾಬ್ ನಡೆಸುತ್ತಿದ್ದ ಸತೀಶ್ ಬಂಧಿತರು.

ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳು ಖಾಸಗಿ ಲ್ಯಾಬ್​ನಲ್ಲಿ ಸಂಗ್ರಹಿಸುತ್ತಿದ್ದ ಸ್ವ್ಯಾಬ್ ಅನ್ನು ಸರ್ಕಾರಿ ಅಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುತ್ತಿದ್ದರು. ಪ್ರತಿ ಟೆಸ್ಟ್​ಗೆ 100 ರೂ.ಪಡೆಯುತ್ತಿದ್ದು, ದಿನಕ್ಕೆ ಸುಮಾರು 30-40 ಸ್ವ್ಯಾಬ್​​​ ಪರೀಕ್ಷೆ ಮಾಡಿ ಹಣ ಪಡೆಯುತ್ತಿದ್ದರು. ಕಳೆದ ಡಿಸೆಂಬರ್​ನಿಂದ ಇದುವರೆಗೂ 500ಕ್ಕೂ ಹೆಚ್ಚು ಸ್ವ್ಯಾಬ್​ಗಳನ್ನು ಅಕ್ರಮವಾಗಿ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ‌.

ಇದನ್ನೂ ಓದಿ:ದುಬಾರಿ ಬೆಲೆಗೆ ರೆಮ್ಡಿಸಿವಿರ್ ಮಾರಾಟ: ಸಿಸಿಬಿಯಿಂದ ಮತ್ತಿಬ್ಬರ ಬಂಧನ

ABOUT THE AUTHOR

...view details