ಬೆಂಗಳೂರು : ಬೆಸ್ಕಾಂ ಅಳವಡಿಸಿದ್ದ ಯುಪಿಎಸ್ ಬ್ಯಾಟರಿಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಬೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ್ ನೀಡಿದ ದೂರಿನ ಮೇರೆಗೆ ಕಟ್ಟಿಗೇನಹಳ್ಳಿ ನಿವಾಸಿಗಳಾದ ಚಿನ್ನಿದೊರೈ, ರಮೇಶ್, ವೇಣುಗೋಪಾಲ್ ಹಾಗೂ ವಸಂತ್ ಎಂಬುವರನ್ನು ಬಂಧಿಸಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಪ್ರಮುಖ ಆರೋಪಿ ಚಿನ್ನಿದೊರೈ ಈ ಹಿಂದೆ ಲಗೇಜ್ ಆಟೋದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಜೊತೆಗೆ ಗುಜರಿ ಅಂಗಡಿ ತೆರೆದಿದ್ದ. ಬಂಧಿತ ಆರೋಪಿಗಳೆಲ್ಲರೂ ಸಂಬಂಧಿಕರಾಗಿದ್ದು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಚಿನ್ನಿದೊರೈ ರಸ್ತೆ ಬದಿಗಳಲ್ಲಿ ಟ್ರಾನ್ಸ್ ಫಾರ್ಮರ್ಗಳ ಕಾರ್ಯದೊತ್ತಡ ತಗ್ಗಿಸುವ ಬ್ಯಾಟರಿಗಳನ್ನು ಕಳ್ಳತನ ಮಾಡಿ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿ ಬಿಡದ ಖದೀಮರು ಚಿನ್ನಿದೊರೈ ಸಂಬಂಧಿಕರಿಗೆ ಹಣದಾಸೆ ತೋರಿಸಿ ಕಳ್ಳತನಕ್ಕೆ ಬರುವಂತೆ ಕರೆದಿದ್ದ. ಮಧ್ಯರಾತ್ರಿ ಆಟೋದಲ್ಲಿ ತೆರಳಿ ಮಲ್ಲೇಶ್ವರ, ವೈಯಾಲಿಕಾವಲ್, ಗಿರಿನಗರ, ಸದಾಶಿವನಗರ ಸೇರಿದಂತೆ ನಗರದ 11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು.
ರಾತ್ರೋರಾತ್ರಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸತತ 15 ದಿನಗಳಿಂದ ಕಾರ್ಯಾಚರಣೆ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ನಗರ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100 ಬ್ಯಾಟರಿ ಹಾಗೂ ಎರಡು ಲಗೇಜ್ ಆಟೋ ಸೇರಿದಂತೆ ನಾಲ್ಕು ಆಟೋ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ :ಭಟ್ಕಳ ಬಾಲಕನ ಕಿಡ್ನ್ಯಾಪ್ ಪ್ರಕರಣ.. ಹಣ ವಾಪಸ್ ಪಡೆಯಲು ಅಜ್ಜನಿಂದಲೇ ಮೊಮ್ಮಗನ ಅಪಹರಣ