ಕರ್ನಾಟಕ

karnataka

ETV Bharat / state

ಹೊಸ ವರ್ಷಕ್ಕೆ ನಶೆ ಏರಿಸಲು ಸಜ್ಜಾಗಿದ್ದ ಖದೀಮರು: ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ, ನಾಲ್ವರು ಅರೆಸ್ಟ್​

ಸದ್ಯ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಜನ ತಯಾರಾಗಿರುವ ಬೆಂಗಳೂರಲ್ಲಿ ಬೃಹತ್​ ಡ್ರಗ್ಸ್​ ಜಾಲವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್​ಅನ್ನು ವಶಪಡಿಸಿಕೊಂಡಿದ್ದಾರೆ.

banglore
ನಾಲ್ವರ ಬಂಧನ

By

Published : Dec 16, 2020, 11:39 AM IST

ಬೆಂಗಳೂರು:ಡ್ರಗ್ಸ್​ ಜಾಲದ ಮೇಲೆ ಸಿಸಿಬಿ ಅಧಿಕಾರಿಗಳು ನಿರಂತರವಾಗಿ ಕಣ್ಣಿಟ್ಟಿದ್ದು, ಸದ್ಯ ಹೊಸ ವರ್ಷ ಬರ ಮಾಡಿಕೊಳ್ಳುವ ಸಂದರ್ಭದಲ್ಲಿ ಡ್ರಗ್ಸ್​ ಪೂರೈಸಲು ಸಜ್ಜಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ದಕ್ಷಿಣ ದೇವಸ್ಥಾನ ಎದುರು ಇರುವ ಬಿಲ್ಡಿಂಗ್​ನಲ್ಲಿ‌ ಅಂತಾರಾಜ್ಯ ಕುಖ್ಯಾತ‌ ಡ್ರಗ್ಸ್ ಪೆಡ್ಲರ್​ಗಳು ಇರುವ ಮಾಹಿತಿ ಮೇರೆಗೆ ದಾಳಿ ‌ನಡೆಸಿದ್ದಾರೆ. ದಾಳಿ ವೇಳೆ ಎಂ. ತಿರುಪಾಲ್ ರೆಡ್ಡಿ, ಕಮಲೇಶ್, ಸತೀಶ್ ಕುಮಾರ್, ಏಜಾಜ್ ಪಾಷಾ ಎಂಬುವರನ್ನು ಬಂಧಿಸಲಾಗಿದೆ. ನಾಲ್ಕು ಜನ ಆಸಾಮಿಗಳು ಮಾದಕ ವಸ್ತುಗಳಾದ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡಿದ್ದರು. ಮುಂಬರುವ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ, ಸಾಫ್ಟ್​ವೇರ್, ಉದ್ಯೋಗಿಗಳಿಗೆ, ಕಾಲೇಜ್ ಹುಡುಗರಿಗೆ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ಮತ್ತು ಹ್ಯಾಶಿಸ್ ಆಯಿಲ್​ ವಶಪಡಿಸಿಕೊಂಡ ಪೊಲೀಸರು

ಬರ್ತ್‌ಡೇ ಮುಗಿಸಿ ಬುಲೆಟ್‌ನಲ್ಲಿ ಬರುತ್ತಿದ್ದ ವೇಳೆ ದುರ್ಘಟನೆ: ಅಪಘಾತದ ಸಿಸಿಟಿವಿ ದೃಶ್ಯ

ಬಂಧಿತ ಆರೋಪಿಗಳಿಂದ ಒಟ್ಟು 1 ಕೋಟಿ 15 ಲಕ್ಷ ಮೌಲ್ಯದ 5. ಕೆ.ಜಿ 600ಗ್ರಾಂ ಹ್ಯಾಶಿಶ್ ಆಯಿಲ್, 3.ಕೆ.ಜಿ 300ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್, ಗಾಂಜಾ ಹಾಗೂ ಹ್ಯಾಶಿಶ್ ಆಯಿಲ್ ತೂಕ ಮಾಡಲು ಇಟ್ಟಿದ್ದ ಒಂದು ತೂಕದ ಯಂತ್ರ, 1 ಕಾರು ,1 ದ್ವಿಚಕ್ರ ವಾಹನ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಬಳಿಯಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.

ಸದ್ಯ ಸಿಸಿಬಿ ಪೊಲೀಸರು ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ‌ವಸ್ತು ಪೂರೈಕೆ ಹೆಚ್ಚಾಗುವ ಕಾರಣ ಎಲ್ಲೆಡೆ ಅಲರ್ಟ್ ಆಗಿದ್ದಾರೆ.

ABOUT THE AUTHOR

...view details