ಕರ್ನಾಟಕ

karnataka

ETV Bharat / state

ವಜ್ರದ ವ್ಯಾಪಾರಿ ಅಪಹರಣ, ಹಣ ವಸೂಲಿ : ಕನ್ನಡದ ಖಳನಟ ಸೇರಿ ನಾಲ್ವರ ಬಂಧನ - ವಜ್ರದ ವ್ಯಾಪಾರಿ ಅಪಹರಣ ಪ್ರಕರಣದಲ್ಲಿ ಕನ್ನಡದ ಖಳನಟ ಬಂಧನ

ಕಳೆದ ತಿಂಗಳು 20ರಂದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

four-arrested-including-villain-in-diamond-merchant-kidnap-case
ವಜ್ರದ ವ್ಯಾಪಾರಿ ಅಪಹರಣ, ಹಣ ವಸೂಲಿ : ಕನ್ನಡದ ಖಳನಟ ಸೇರಿ ನಾಲ್ವರ ಬಂಧನ

By

Published : Jun 2, 2022, 4:36 PM IST

ಬೆಂಗಳೂರು:‌ಹಣಕ್ಕಾಗಿ ವಜ್ರದ ವ್ಯಾಪಾರಿಯನ್ನು ಅಪಹರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಪ್ರಕರಣದಲ್ಲಿ ಕನ್ನಡದ ಖಳನಟ ಸೇರಿ ನಾಲ್ವರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ವೀರಪರಂಪರೆ, ದುಷ್ಟ ಹಾಗೂ‌ ಉಡಾ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಆರೋಪಿ ನಾರಾಯಣ ಹಾಗೂ ಸಹಚರರಾದ ಉಮೇಶ್, ನರ್ತನ್ ಹಾಗೂ ಅಶ್ವತ್ಥ ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಕಳೆದ ತಿಂಗಳು 20ರಂದು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿ ಎರಡು ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಕೊನೆಗೆ 25 ಲಕ್ಷ ರೂಪಾಯಿ ಹಣ ಪಡೆದು ಆರು ಚೆಕ್​ ಪಡೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸಾಲದ ಕತೆ ಕಟ್ಟಿದ ಆರೋಪಿಗಳು:ಆರೋಪಿ ಉಮೇಶ್ ಕೊಟ್ಟ ಪ್ಲಾನ್ ಮೇರೆಗೆ ನಾರಾಯಣ ಕಿಡ್ನಾಪ್ ಯೋಜನೆ ರೂಪಿಸಿದ್ದ. ವಜ್ರದ ವ್ಯಾಪಾರಿ ಬಳಿ ಸಾಕಷ್ಟು ಹಣವಿದೆ. ಬೆದರಿಸಿದರೆ ಹಣ ಸಿಗುತ್ತೆ ಎಂಬ ಯೋಚನೆ ಮಾಡಿದ್ದಾರೆ. ಆದರೆ ಪ್ಲಾನ್ ವರ್ಕೌಟ್ ಆದರೂ ಕೊನೆಗೆ ಖಾಕಿ‌ ಕೈಗೆ ಲಾಕ್ ಆದಾಗ ಸಾಲದ ಕತೆ ಕಟ್ಟಿ ತಪ್ಪಿಸಿಕೊಳ್ಳುವ ನಾಟಕ ಆಡಿದ್ದಾರೆ.‌ ತನಿಖೆಯಲ್ಲಿ ಆರೋಪಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿರುವುದು ಖಚಿತವಾಗಿದೆ. ಪೊಲೀಸರು ಆರೋಪಿತರಿಂದ 15 ಲಕ್ಷ ನಗದು ಹಾಗೂ ಒಂದು ಕಾರು ವಶಕ್ಕೆ ಪಡೆದು, ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಫೈನಾನ್ಸ್ ಕಂಪನಿಗೆ ಕನ್ನ ಹಾಕಲು ಯತ್ನಿಸಿದ ನೈಟಿ ಗ್ಯಾಂಗ್ ಬಂಧನ

ABOUT THE AUTHOR

...view details