ಕರ್ನಾಟಕ

karnataka

ETV Bharat / state

ಕ್ರೀಡಾಂಗಣದಲ್ಲೇ ಕುಳಿತೇ ಬೆಟ್ಟಿಂಗ್‌; ಲೈವ್ ಮ್ಯಾಚ್‌-ಪ್ರಸಾರ ಸಮಯದ ವ್ಯತ್ಯಾಸವೇ ಇವರ ಬಂಡವಾಳ! - ETV Bharat kannada News

ಲೈವ್ ಆಗಿ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ದಂಧೆಕೋರರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

Cricket Betting
ಕ್ರಿಕೆಟ್ ಬೆಟ್ಟಿಂಗ್

By

Published : Apr 14, 2023, 8:13 PM IST

ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಯಲು

ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಎಲ್ಲೆಲ್ಲಿಯೂ ಐಪಿಎಲ್ ಜ್ವರ‌ ಶುರುವಾಗಿದೆ. ಕ್ರಿಕೆಟ್ ಹಬ್ಬವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆಕೋರರು ಕಾನೂನುಬಾಹಿರವಾಗಿ ಹಣ ಗಳಿಸುತ್ತಿದ್ದು, ಪಂದ್ಯ ನಡೆಯುವ ಕ್ರೀಡಾಂಗಣಕ್ಕ ತೆರಳಿ ಮ್ಯಾಚ್ ನಡೆಯುವಾಗಲೇ ಲೈವ್ ಆಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರು ದಂಧೆಕೋರರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರಾ ಹಾಗೂ ದುಶ್ಯಂತ್ ಕುಮಾರ್ ಸೋನಿ ಬಂಧಿತರು. ದಂಧೆಯ ಹಿಂದೆ ಹಲವರ ಕೈವಾಡವಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌.

ಇದನ್ನೂ ಓದಿ :ಬೆಟ್ಟಿಂಗ್​ ಸಂಸ್ಥೆಯ ರಾಯಭಾರಿಯಾಗಿ ವಿವಾದದಲ್ಲಿ ಸಿಲುಕಿದ ಬ್ರೆಂಡನ್‌ ಮೆಕಲಮ್​

ವ್ಯವಸ್ಥಿತವಾಗಿ ಸಂಚು ರೂಪಿಸಿ ಮ್ಯಾಚ್ ವೀಕ್ಷಿಸುವ ನೆಪದಲ್ಲಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ಆರೋಪಿಗಳು ಅಲ್ಲಿ ಕುಳಿತು ಹೊರಗಿನ ವ್ಯಕ್ತಿಗಳೊಂದಿಗೆ ದಂಧೆ ನಡೆಸುತ್ತಿದ್ದರು‌. ಲೈವ್ ಮ್ಯಾಚ್​ಗೂ ಹಾಗೂ ಟಿವಿಯಲ್ಲಿ ಪ್ರಸಾರವಾಗುವ ಸಮಯಕ್ಕೂ ಕೆಲವು ಕ್ಷಣಗಳ ವ್ಯತ್ಯಾಸವಿರುತ್ತದೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಪ್ರತಿ ಬಾಲ್ ಟು ಬಾಲ್​ಗೆ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು‌‌. ಇದನ್ನು ತಿಳಿಯದ ಸಾರ್ವಜನಿಕರು ಆರೋಪಿಗಳು ತೋಡಿದ್ದ ಹಳ್ಳಕ್ಕೆ ಬೀಳುತ್ತಿದ್ದರು.

ಡಿಸಿಪಿ ಪ್ರತಿಕ್ರಿಯೆ: ಈ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ಬಾತ್ಮೀಯದಾರರು ನೀಡಿದ ಮಾಹಿತಿ ಮೇರೆಗೆ ಮಪ್ತಿಯಲ್ಲಿ 30ಕ್ಕಿಂತ ಹೆಚ್ಚು ಪೊಲೀಸ್​ಸಿಬ್ಬಂದಿಯೊಂದಿಗೆ ಕ್ರೀಡಾಂಗಣದಲ್ಲಿ ಕಾರ್ಯಾಚರಣೆ ನಡೆಸಿದ್ದೆವು. ಈ ವೇಳೆ ಯಾರು ಪಂದ್ಯದ ಮಧ್ಯ ಫೋನಿನಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತರೋ ಅವರ ಫೋನ್​ ಚೆಕ್​ ಮಾಡಿದ್ದು ಕ್ರಿಕೆಟ್​ ಬೆಟ್ಟಿಂಗ್​ ಆ್ಯಪ್​ಗಳು ಇರುವುದು ಪತ್ತೆಯಾಗಿತ್ತು. ತತ್​ಕ್ಷಣವೇ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು.

ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು ಬೆಂಗಳೂರು ಮಾತ್ರವಲ್ಲದೆ‌ ದೇಶದಲ್ಲಿ ಇತರೆ ಭಾಗಗಳಲ್ಲಿ ಐಪಿಎಲ್ ಮ್ಯಾಚ್​ಗಳು ನಡೆಯುವ ಕ್ರೀಡಾಂಗಣದಲ್ಲಿಯೂ ವ್ಯವಸ್ಥಿತ ಜಾಲದಿಂದ ಸದಸ್ಯರ ಮೂಲಕ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ.ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಮಾಹಿತಿ ನೀಡಿದರು.

ಇದನ್ನೂ ಓದಿ :144 ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಿದ ಪೊಲೀಸರು: CEIR ಆ್ಯಪ್‌ ಬಳಕೆ ಗೊತ್ತೇ?

ABOUT THE AUTHOR

...view details