ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಒಂಟಿ ಮಹಿಳೆಯರ ಟಾರ್ಗೆಟ್​: ದರೋಡೆಗೆ ಹೊಂಚು ಹಾಕಿದ್ದ ಖದೀಮರು ಅರೆಸ್ಟ್​ - four accused arrest in banglore

ಉತ್ತರಹಳ್ಳಿ ಮುಖ್ಯರಸ್ತೆಯ ಆಶ್ರಮದ ಬಳಿ ದರೋಡೆ ಮಾಡಲು ಮುಂದಾಗಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹಲ್ಲೆ ಮಾಡಲು ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

banglore
ನಾಲ್ವರು ಆರೋಪಿಗಳ ಬಂಧನ

By

Published : Feb 6, 2021, 12:45 PM IST

ಬೆಂಗಳೂರು:ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನೆಡಸಿ ಬಂಧಿಸಿದ್ದಾರೆ.

ಕುಖ್ಯಾತ ರೌಡಿ ಆಟೋ ರಾಮನ ಸಹೋದರ ಕೆ.ಎಸ್. ನಾಗರಾಜ ಎಂಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಈತನ 3 ಜನ ಸಹಚರರನ್ನು ಪೊಲೀಸರು ತಮ್ಮ ಬಲೆಗೆ ಕೆಡವಿದ್ದಾರೆ. ಉತ್ತರಹಳ್ಳಿ ಮುಖ್ಯರಸ್ತೆಯ ಆಶ್ರಮದ ಬಳಿ ದರೋಡೆಗೆ ಮುಂದಾಗಿದ್ದ ಆರೋಪಿಗಳಿಗೆ, ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಇವರು ಹಲ್ಲೆ ಮಾಡಿ ನಗದು ಹಾಗೂ ಚಿನ್ನಾಭರಣ ದೋಚುತ್ತಿದ್ದರು ಎಂದು ತಿಳಿದು ಬಂದಿದೆ.

ನಾಗರಾಜ್, ಚಂದ್ರೇಗೌಡ, ಕುಮಾರ್, ಕೆ.ಎಸ್. ಗೋಪಾಲ್ ಬಂಧಿತರಾಗಿದ್ದು, ಹಲ್ಲೆ ಮಾಡಲು ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರೆದಿದೆ.

ಓದಿ:ಪ್ರಿಯತಮೆ​, ಆಕೆಯ ತಾಯಿಗೆ ಸೀಮೆಎಣ್ಣೆ ಸುರಿದು ತಾನೂ ಬೆಂಕಿ ಹಚ್ಚಿಕೊಂಡ ಪ್ರೇಮಿ!

ABOUT THE AUTHOR

...view details