ಬೆಂಗಳೂರು: ಕೋವಿಡ್ ನಂತರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಅತ್ಯಾಧುನಿಕ "ಕ್ಯಾಥ್‌ಲ್ಯಾಬ್" ಅನ್ನು ನಾಗರಭಾವಿ ಪೋರ್ಟಿಸ್ ಆಸ್ಪತ್ರೆಯಲ್ಲಿ ಇಂದು ಆರಂಭಿಸಲಾಯಿತು. ಖಾಸಗಿ ಆಸ್ಪತ್ರೆ ವಲಯದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯ ಕಲ್ಪಿಸುತ್ತಿರುವ ಪೋರ್ಟೀಸ್ ಆಸ್ಪತ್ರೆ ಬನ್ನೇರುಘಟ್ಟ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ ಆಸ್ಪತ್ರೆ ನಂತರ ನಾಗರಬಾವಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಕಲ್ಪಿಸಿದೆ.
ನಾಗರಬಾವಿಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೊಸದಾಗಿ ಕ್ಯಾಥ್ ಲ್ಯಾಬ್ ಆರಂಭಿಸಲಾಗಿದೆ. ಹೃದಯ ಸಂಬಂಧಿ ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕ್ಯಾಥ್ ಲ್ಯಾಬ್ ಆರಂಭಿಸಿ ಹೃದ್ರೋಗಗಳ ಚಿಕಿತ್ಸೆ ಆರಂಭಿಸುತ್ತಿದೆ. ಇದು ಅತ್ಯಾಧುನಿಕ "ಫಿಲಿಪ್ಸ್ AZURION 7C12" ಕ್ಯಾಥ್‌ಲ್ಯಾಬ್ ಆಗಿದ್ದು, ಉನ್ನತ ಮಟ್ಟದ ಇಂಟಿಗ್ರೇಡೆಡ್ ಐಎಫ್‌ಆರ್ ಸೌಲಭ್ಯದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.
ಹೃದಯದ ಚಲನವಲನ ವೀಕ್ಷಣೆ: ಹೃದಯಾಘಾತವಾದ ಸಂದರ್ಭದಲ್ಲಿ ಪರಿಧಮನಿಗಳ ಕ್ರಿಯಾತ್ಮಕ ಚಲನೆಯ ನೋಡುವ ಡೈನಾಮಿಕ್ ಕರೋನರಿ ರೋಡ್‌ಮ್ಯಾಪ್ (ಡಿಸಿಆರ್) ನಂತಹ ವಿಶಿಷ್ಟವಾದ ಸುಧಾರಿತ ಮಧ್ಯಸ್ಥಿಕೆಯ ಸಾಧನವನ್ನು ಸಹ ಹೊಂದಿದೆ. ಇದು ಸ್ವಯಂಚಾಲಿತವಾಗಿ 2D ಫ್ಲೋರೋಸ್ಕೋಪಿ ಮೂಲಕ ಹೃದಯದ ಒಳಗಿನ ಚಲನವನಗಳ ಮೂಲಕ ನೋಡಬಹುದು. ಇದಷ್ಟೇ ಅಲ್ಲದೇ, ಸಾಕಷ್ಟು ವಿಶೇಷತೆಯಿಂದ ಈ ಕ್ಯಾಥ್‌ಲ್ಯಾಬ್ ಒಳಗೊಂಡಿದ್ದು, ಹಠಾತ್ ಹೃದಯಾಘಾತವಾದರೂ ತ್ವರಿತವಾಗಿ ಚಿಕಿತ್ಸೆ ನೀಡುವ ಎಲ್ಲ ಅತ್ಯಾಧುನಿಕ ಟೆಕ್ನಾಲಜಿ ಹೊಂದಿದೆ.
ಫೋರ್ಟಿಸ್ ಹಾರ್ಟ್ ಸೆಂಟರ್ ಉದ್ಘಾಟನೆ:ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಹೃದಯ ತಜ್ಞ ಡಾ ವಿವೇಕ್ ಜವಳಿ, ಇವತ್ತು ಫೋರ್ಟಿಸ್ ಆಸ್ಪತ್ರೆಯಲ್ಲಿ ಫೋರ್ಟಿಸ್ ಹಾರ್ಟ್ ಸೆಂಟರ್ ಉದ್ಘಾಟನೆ ಮಾಡಲಾಗಿದೆ. ಇಲ್ಲಿ ಕಲ್ಪಿಸಿರುವ ಹೃದಯ ಚಿಕಿತ್ಸಾ ಸೌಲಭ್ಯ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬನ್ನೇರುಘಟ್ಟ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆ ಆಸ್ಪತ್ರೆಯ ನಂತರ ಈಗ ನಾಗರಬಾವಿಯಲ್ಲಿ ಈ ಕ್ಯಾಥ್ ಲ್ಯಾಬ್ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.
ಹೃದಯದ ವಾಲ್ವ್ ಬದಲಾಯಿಸಬಹುದು: ಹೃದಯದಲ್ಲಿ ನೋವು ಕಾಣಿಸಿಕೊಂಡರೆ, ಹೃದಯಾಘಾತವಾದರೆ ಮೂರು ಗಂಟೆಯೊಳಗೆ ಇಲ್ಲಿಗೆ ಬಂದರೆ ಇಲ್ಲಿನ ಅತ್ಯಾಧುನಿಕ ಕ್ಯಾಥ್ ಲ್ಯಾಬ್ನಲ್ಲಿ ಚಿಕಿತ್ಸೆ ನೀಡಿ ಹೃದಯವನ್ನು ನಾರ್ಮಲ್ ಮಾಡಬಹುದಾಗಿದೆ. ಸ್ಟ್ರೋಕ್ ಬಂದರೆ ಮೆದುಳನ್ನು ನಾರ್ಮಲ್ ಸ್ಥಿತಿಗೆ ತರಬಹುದಾಗಿದೆ. ಈ ಲ್ಯಾಬ್ ನಲ್ಲಿ ಆಂಜಿಯೋಪ್ಲಾಸ್ಟಿ, ಸ್ಟಂಟ್ಸ್ ಅನ್ನು ಕಾಲು, ಹಾರ್ಟ್, ಕಿಡ್ನಿ, ಮೆದುಳು ಸೇರಿ ಹಲವಾರು ಜಾಗದಲ್ಲಿ ಮಾಡಬಹುದಾಗಿದೆ.
ಹೃದಯ ಸರ್ಜರಿ ಇಲ್ಲದೆಯೇ ಹೃದಯದ ವಾಲ್ವ್ ಬದಲಾಯಿಸಬಹುದು. ಹೃದಯದಲ್ಲಿನ ರಂದ್ರಗಳನ್ನು ಸರ್ಜರಿ ಇಲ್ಲದೇ ಮುಚ್ಚಬಹುದಾಗಿದೆ. ಬಹಳ ಆಧುನಿಕ ಕೊರೊನರಿ ಕೇರ್ ಇಂಟೆನ್ಸಿವ್ ಕೇರ್ ಆಪರೇಷನ್ ಕೇರ್, ಹಾರ್ಟ್ ಸರ್ಜರಿ ವಿಭಾಗ ಇಲ್ಲಿ ಸಿದ್ದವಾಗಿದೆ. ಇದು ನಾಗರಬಾವಿ ಜನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದರು.