ಕರ್ನಾಟಕ

karnataka

ETV Bharat / state

ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದವರಿಗೇ ಭಾರತ ರತ್ನ ಕೊಡುವುದರ ಬಗ್ಗೆ ಮಾತಾಡ್ತಾರೆ.. ಮಾಜಿ ಪ್ರಧಾನಿ ದೇವೇಗೌಡ ಬೇಸರ - jds office

ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದವರಿಗೆ ಭಾರತ ರತ್ನ ಕೊಡುವುದರ ಬಗ್ಗೆ ಮಾತನಾಡ್ತಾರೆ. ಇವತ್ತಿನ ವ್ಯವಸ್ಥೆ ಹಾಗಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಕಚೇರಿಯಲ್ಲಿ ಗಾಂಧಿ ಹಾಗೂ ಲಾಲ್​ ಬಹದ್ದೂರ್ ಶಾಸ್ತ್ರಿ ಜಯಂತಿ

By

Published : Oct 2, 2019, 9:21 PM IST

ಬೆಂಗಳೂರು:ರಾಷ್ಟ್ರಪಿತಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದವರಿಗೆ ಭಾರತ ರತ್ನ ಕೊಡುವುದರ ಬಗ್ಗೆ ಮಾತನಾಡ್ತಾರೆ. ಇವತ್ತಿನ ವ್ಯವಸ್ಥೆ ಹಾಗಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಕಚೇರಿಯಲ್ಲಿ ಗಾಂಧಿ ಹಾಗೂ ಲಾಲ್​ ಬಹದ್ದೂರ್ ಶಾಸ್ತ್ರಿ ಜಯಂತಿ..

ಜೆಪಿ ಭವನದಲ್ಲಿನ ಜೆಡಿಎಸ್ ಕಚೇರಿಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರಿಬ್ಬರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗೌಡರು, ನಾನು ಜೀವನದ ಕೊನೆಯಲ್ಲಿದ್ದೇನೆ. ಯಾವುದೇ ಪಕ್ಷ ಹಾಗೂ ವ್ಯಕ್ತಿಯನ್ನೂ ದೂಷಣೆ ಮಾಡುವುದಿಲ್ಲ ಎಂದರು.

ಗಾಂಧೀಜಿ ಅವರೇ ಸ್ವತಃ ತಮ್ಮ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ. ಬಹುಶಃ ದೇಶದಲ್ಲೇ ಗಾಂಧಿಯಂತೆ ಬಂದು ಹೋದವರು ಅತೀ ವಿರಳ. ಅವರು ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಅಂತಹವರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ತಮ್ಮ ಜೀವನವನ್ನು ಮುಡುಪಾಗಿಟ್ಟು ಸತ್ಯ, ಶಾಂತಿ, ಅಹಿಂಸೆಯಿಂದ ಹೋರಾಟ ಮಾಡಿದ್ದರು. ಅದು ಈಗ ಕೊಲೆಯಾಗಿದೆ. ಅವರ ಪುಸ್ತಕವನ್ನು ಓದಿದಾಗ ಮನಸ್ಸಿಗೆ ನೋವಾಗುತ್ತದೆ. ಗಾಂಧಿ ಹೆಸರು ಹೇಳುತ್ತಾರೆ. ಆದರೆ, ಅವರ ನಡವಳಿಕೆಗಳಲ್ಲಿ ತದ್ವಿರುದ್ಧವಾದ ಆ ದಿಕ್ಕಿನಲ್ಲಿ ಸಾಗುತ್ತಿವೆ. ಯಾವುದೇ ಪಕ್ಷ, ಸಮುದಾಯ ಕುರಿತಾಗಿ ಹೇಳುತ್ತಿಲ್ಲ. ಆ ಘಟ್ಟ ಮುಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಡವಳಿಕೆಗಳಿಂದ ನಾವು ಗಾಂಧಿಯನ್ನು ಮರೆಯಬಹುದು. ಜೀವನದಲ್ಲಿ ಪ್ರಸ್ತುತ ಗಾಂಧಿಯವರನ್ನು ಮರೆಯುವ ಕಾಲ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ಟ್ವೀಟ್​ಗೆ ಪ್ರತಿಕ್ರಿಯೆ: ಬಿಹಾರ ನೆರೆ ವಿಚಾರವಾಗಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಗೌಡರು, ಬಿಹಾರದಲ್ಲಿ ಮೈತ್ರಿ ಸರ್ಕಾರವಿದ್ದು, ಮುಂದಿನ ಬಾರಿ ಬಹುಮತ ಪಡೆಯಬಹುದು. ಆ ಕಾರಣಕ್ಕೆ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಗಮನಿಸಿದ್ದೇನೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ. ಗಾಂಧಿ ಜಯಂತಿಯಂದು ಇದಕ್ಕಿಂತ ಹೆಚ್ಚು ಹೇಳುವುದು ಬೇಡ. ಪ್ರತ್ಯೇಕವಾಗಿ ಮಾತನಾಡೋಣ ಎಂದರು.
ಜೆಡಿಎಸ್‌ನ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ನಾರಾಯಣರಾವ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

ABOUT THE AUTHOR

...view details