ದೊಡ್ಡಬಳ್ಳಾಪುರ :ಹೊಸ ವರ್ಷ 2020ರ ಪ್ರಯುಕ್ತ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ನಾಡಿನ ಜನರಿಗೆ ಶುಭಕೋರಿದ್ದಾರೆ.
ರಾಜಕಾರಣಿಗಳಿಗೆ ಸದ್ಬುದ್ಧಿ ಬರಲಿ, ಶಾಂತಿ ನೆಲೆಸಲಿ.. ಮಾಜಿ ಪ್ರಧಾನಿ ದೇವೇಗೌಡರಿಂದ ವಿಷ್! - dhodballapura New Year wish Deve Gowda
ಹೊಸ ವರ್ಷ 2020ರ ಪ್ರಯುಕ್ತ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ನಾಡಿನ ಜನರಿಗೆ ಶುಭ ಹಾರೈಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ನ ಜಾಂಬೋರೇಟ್ ಶಿಬಿರ ಅಂಗವಾಗಿ ಏರ್ಪಡಿಸಲಾಗಿದ್ದ ಸರ್ವಧರ್ಮ ಪ್ರಾರ್ಥನೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ನೂತನ ವರ್ಷ 2020ಕ್ಕೆ ಜನರಿಗೆ ಶುಭಾಶಯ ತಿಳಿಸಿದರು. 2020ರಲ್ಲಿ ದೇಶದ ಬಿಕ್ಕಟ್ಟುಗಳು ಬಗೆಹರಿಯಲಿ, ದೇಶದಲ್ಲಿ ಸುಖಶಾಂತಿ ನೆಲೆಸಲು ದೈವಕೃಪೆ ಬೇಕಾಗಿದೆ ಎಂದರು.
ರಾಜಕಾರಣಿಗಳು ಇವತ್ತು ಅಡ್ಡದಾರಿಯಲ್ಲಿ ಹೋಗ್ತಿದ್ದಾರೆ. ಅವರಿಗೆ ಸದ್ಬುದ್ಧಿ ಬರಬೇಕಿದೆ. ಇಡೀ ದೇಶಕ್ಕೆ ಶಾಂತಿ ನೆಲೆಸುವ ಅವಕಾಶ ಸಿಕ್ಕರೆ ದೇಶಕ್ಕೆ ಒಳ್ಳೆಯದು, ಎಲ್ಲರೂ ಸೌಹಾರ್ದದಿಂದ ಬಾಳಬಹುದು ಎಂದರು.