ಬೆಂಗಳೂರು:ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಮಾಜಿ ಪ್ರಧಾನಿ ದೇವೇಗೌಡರು ದೂರವಾಣಿ ಮೂಲಕ ಅವರ ಆರೋಗ್ಯ ವಿಚಾರಿಸಿದ್ದಾರೆ.
ಜಮೀರ್ ಅಹಮದ್ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು - Zameer Ahmed
ಕೊರೊನಾ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಜಮೀರ್ ಅಹಮದ್ ಅವರ ಆರೋಗ್ಯವನ್ನು ಮಾಜಿ ಪ್ರಧಾನಿ ದೇವೇಗೌಡರು ದೂರವಾಣಿ ಮೂಲಕ ವಿಚಾರಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು
ಕೊರೊನಾ ಪಾಸಿಟಿವ್ ಹಿನ್ನೆಲೆ ಜಮೀರ್ ಅಹಮದ್ ಅವರು, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಮೀರ್ ಅವರಿಗೆ ದೂರವಾಣಿ ಕರೆ ಮಾಡಿದ ಗೌಡರು, ಮೂರು ತಿಂಗಳು ಜನರ ಮಧ್ಯೆ ಇದ್ದು, ನೀವು ಮಾಡಿರುವ ಕೆಲಸವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.
ಶೀಘ್ರವೇ ಗುಣಮುಖರಾಗಿ ಬನ್ನಿ. ದೇವರು ನಿಮಗೆ ಆರೋಗ್ಯಕೊಟ್ಟು ಜನರ ಸೇವೆಗೆ ಅತಿ ಹೆಚ್ಚು ತೊಡಗುವಂತಾಗಲಿ ಎಂದು ಹಾರೈಸಿದ್ದಾರೆ.