ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 2006ರಲ್ಲಿ ನಡೆಸಿರುವ ಡಿನೋಟಿಫೈಕೇಷನ್ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಸ್ವಾಗತಿಸಿದ್ದು, ನಿಷ್ಪಕ್ಷಪಾತ ತನಿಖೆಯಾಗಿ ಬಿಎಸ್‌ವೈ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಸಿಎಂ ಬಿಎಸ್‌ವೈ 2006 ರಲ್ಲಿ ಡಿಸಿಎಂ ಆಗಿದ್ದರು. ಆ ಸಂದರ್ಭದಲ್ಲಿ ನಡೆಸಿದ್ದರು ಎನ್ನಲಾದ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸಬಹುದು ಎಂದು ಹೈಕೋರ್ಟ್ ನಿನ್ನೆ ತಿಳಿಸಿದೆ. ಇದನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದು, ಒಂದು ಉತ್ತಮ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಇದೀಗ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು ಆಗಿರುವ ವಿಎಸ್ ಉಗ್ರಪ್ಪ ಅವರು ಹೈಕೋರ್ಟ್ ಆದೇಶವನ್ನು ಕೊಂಡಾಡಿದ್ದಾರೆ.
ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಗ ದೇವರಬೀಸನಹಳ್ಳಿ ಸರ್ವೆ ನಂಬರ್ 49-4.20 ಎಕರೆ ಡಿನೋಟಿಫೈ ಮಾಡಿದ್ದರು. ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಡಿನೋಟಿಫೈ ಮಾಡಿದ್ದರು. ಹಣಕ್ಕೋಸ್ಕರ ಲಾಭಕ್ಕೋಸ್ಕರ ಡಿನೋಟಿಫೈ ಮಾಡಿದ್ರು ಎಂಬ ಹಿನ್ನೆಲೆ ಖಾಸಗಿ ದೂರು ದಾಖಲಾಗಿತ್ತು. ಖಾಸಗಿ ದೂರನ್ನು ಕೋರ್ಟ್ ತೆಗೆದುಕೊಂಡು ಸಂಬಂಧಿಸಿದ ಲೋಕಾಯುಕ್ತ ಪೊಲೀಸರಿಗೆ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದ್ರು. ಲೋಕಾಯುಕ್ತ ತನಿಖೆ ಮಾಡಿ 2015 ರಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ರು. 2015 ರಿಂದ 2019 ರವರೆಗೆ ಯಾವುದೇ ಲೋಕಾಯುಕ್ತ ಅಧಿಕಾರಿಯೂ ಇದರ ತನಿಖೆ ಮಾಡಿರಲಿಲ್ಲ. ಇದೀಗ ಹೈ ಕೋರ್ಟ್ನಿಂದ ತನಿಖೆಗೆ ಆದೇಶ ಬಂದಿದೆ. ಭ್ರಷ್ಟಾಚಾರ ತಡೆಯಲು ಇದು ಅತ್ಯುತ್ತಮ ಆದೇಶ ಎಂದು ಹೇಳಿದ್ದಾರೆ.
ನಾನೂ ತಿನ್ನಲ್ಲ, ತಿನ್ನೋದಕ್ಕೂ ಬಿಡೋದಿಲ್ಲ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳ್ತಾರೆ. ಆದರೆ ಯಡಿಯೂರಪ್ಪ ಹಣಕ್ಕೋಸ್ಕರ, ವೈಯಕ್ತಿಕ ಲಾಭಕ್ಕೋಸ್ಕರ ಡಿನೋಟಿಫೈ ಮಾಡಿದ್ರು. ಇದೀಗ ತನಿಖೆಗೆ ಆದೇಶವಾಗಿದ್ದು ತಕ್ಷಣ ಯಡಿಯೂರಪ್ಪ ರಾಜೀನಾಮೆ ನೀಡಬೇಕು. ಬಿಜೆಪಿಯವರು ಟಾಂ ಟಾಂ ಮಾಡ್ತಿದ್ದಾರೆ. ನಮ್ಮದು ಭ್ರಷ್ಟಾಚಾರದ ವಿರುದ್ದ ಅಂತ. ಈಗ ಯಡಿಯೂರಪ್ಪ ನವರು ರಾಜೀನಾಮೆ ಪಡೆಯಲಿ ಹಾಗಾದರೆ ಎಂದು ಸವಾಲು ಹಾಕಿದ್ದಾರೆ.
ಪ್ರಭಾವ ಬೀರುವ ಸಾಧ್ಯತೆ
ತನಿಖೆಯಲ್ಲಿ ಯಡಿಯೂರಪ್ಪ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಿಎಸ್‌ವೈ ರಾಜೀನಾಮೆ ನೀಡದೇ ಹೋದರೆ ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ಮಾಡಲಿದೆ. ಯಾವ ಮುಖ ಇಟ್ಕೊಂಡು ಬಿಎಸ್‌ವೈ ಅವರನ್ನು ಸಿಎಂ ಆಗಿ ಮುಂದುವರೆಸಲು ಸಾಧ್ಯ? ಬಿಜೆಪಿಯವರಿಗೆ ಎಳ್ಳಷ್ಟಾದರೂ ಬದ್ದತೆ ಇದ್ರೆ ರಾಜೀನಾಮೆ ಪಡೆಯಬೇಕಿತ್ತು. ಲೋಕಾಯುಕ್ತ ಮೇಲೆ ಪ್ರಭಾವ ಬೀರುವ ಪ್ರವೃತ್ತಿ ನಮ್ಮದಲ್ಲ. ಹೀಗಾಗಿ ಅಧಿಕಾರ ಇರಲಿ ಇಲ್ಲದೇ ಇರಲಿ ನಾವು ಲೋಕಾಯುಕ್ತದಲ್ಲಿ ಪ್ರಭಾವ ಬೀರಲಿಲ್ಲ. ನಾಲ್ಕು ವರ್ಷ ಯಾಕೆ ಲೋಕಾಯುಕ್ತ ತನಿಖೆ ಮಾಡಿರಲಿಲ್ಲ? ಯಡಿಯೂರಪ್ಪ ಬಹುಶಃ ಆಗಲೂ ಲೋಕಾಯುಕ್ತದ ಮೇಲೆ ಪ್ರಭಾವ ಬೀರಿರಬಹುದು. ಈಗಲೂ ಗೃಹ ಸಚಿವರು ಇವರ ಕೈಯ್ಯಲ್ಲೇ ಇರುವುದರಿಂದ ಈಗಲೂ ಪ್ರಭಾವ ಬೀರಬಹುದು. ಹೀಗಾಗಿ ದೇವರಬೀಸನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಯಡಿಯೂರಪ್ಪ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಎಂ ರಾಜೀನಾಮೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಆಗ್ರಹ
ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ ವಿಚಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನ್ಯಾಯಾಲಯದ ನಿರ್ಧಾರದ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಲ್ಲಿ ಒಂದು ಕ್ಷಣಕ್ಕೂ ಮುಂದುವರಿಯಲು ಬಿಎಸ್ವೈಗೆ ಹಕ್ಕಿಲ್ಲ ಎಂದಿರುವ ಅವರು ಡಿನೋಟಿಫೈ ಆರೋಪದ ತನಿಖೆ ಅಂತಿಮಗೊಳ್ಳುವವರೆಗೆ ರಾಜೀನಾಮೆ ನೀಡುವಂತೆ ಆಗ್ರಹ ಮಾಡಿದ್ದಾರೆ.
ಓದಿ:ಎಲ್ಲಾ ವಿಮಾನಗಳ ಹಾರಾಟ ರದ್ದುಪಡಿಸುವುದು ಸೂಕ್ತ: ಸಿದ್ದರಾಮಯ್ಯ
ಡಿನೋಟಿಫೈಗೆ ಸಂಬಂಧಿಸಿದಂತೆ ವಾಸುದೇವರೆಡ್ಡಿ ಎಂಬುವವರು 2013 ಜುಲೈ 10 ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು. ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶಿಸಿತ್ತು. 2015 ರಲ್ಲಿ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ದೇಶಪಾಂಡೆ ಅವರನ್ನು ಮೊದಲ ಆರೋಪಿಯನ್ನಾಗಿ ಬಿಎಸ್ ಯಡಿಯೂರಪ್ಪ ಅವರನ್ನು 2 ನೇ ಆರೋಪಿಯನ್ನಾಗಿಸಿದ್ದರು. 2019 ರಲ್ಲಿ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದ ಬಿಎಸ್‌ವೈ ಸಕ್ಷಮ ಪ್ರಾಧಿಕಾರದಿಂದ ಪುರ್ವಾನುಮತಿ ಪಡೆಯದೇ ತಮ್ಮ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ದೂರಿದ್ದರು. ಆದರೆ ಇದೀಗ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಯನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಇದೇ ವಿಚಾರವನ್ನು ಆಧಾರವಾಗಿಟ್ಟುಕೊಂಡು ಸಿಎಂ ಬಿಎಸ್ ವೈ ರಾಜಿನಾಮೆ ಸುರ್ಜೆವಾಲಾ ಆಗ್ರಹಿಸಿದ್ದಾರೆ.