ಕರ್ನಾಟಕ

karnataka

ETV Bharat / state

ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಮಾಜಿ ಶಾಸಕ ಪುತ್ರನಿಂದ ಹಲ್ಲೆ - ಹಾಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರ ಆಂಜಿನಪ್ಪ ವಜ್ಜಲ್

ವಸಂತ ನಗರ ಎಂಬೆಸ್ಸಿ ಅಪಾರ್ಟ್​ಮೆಂಟ್​ನಲ್ಲಿ ಆಂಜಿನಪ್ಪ ವಜ್ಜಲ್ ವಾಸ ಮಾಡುತ್ತಿದ್ದಾರೆ. ಕಳೆದ ಭಾನುವಾರ ಕಾರು ಪಾರ್ಕಿಂಗ್ ವಿಚಾರವಾಗಿ ವಿಕ್ರಂ ರೈ ವಿರುದ್ಧ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಕಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

former-mlas-son-anjinappa-vajjal-assault-news
ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ

By

Published : Sep 17, 2021, 12:55 AM IST

ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಮಾಜಿ ಶಾಸಕರೊಬ್ಬರ ಪುತ್ರ ಹಲ್ಲೆ ನಡೆಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಮಧ್ಯೆ ಎರಡು ಕಡೆಯವರಿಂದಲೂ ತೆರೆಮರೆಯಲ್ಲಿ‌ ರಾಜಿ ಸಂಧಾನ ಯತ್ನ ನಡೆಯುತ್ತಿದೆ‌.

ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ

ರಾಯಚೂರಿನ ಲಿಂಗಸೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರ ಆಂಜಿನಪ್ಪ ವಜ್ಜಲ್ ಎಂಬಾತ ಉದ್ಯಮಿ ದೀಪಕ್ ರೈ‌ ಪುತ್ರ ವಿಕ್ರಮ್ ರೈ ಎಂಬುವವರ ಮೇಲೆ‌ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.‌‌ ಇದಕ್ಕೆ ಪೂರಕವಾಗಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ವಸಂತ ನಗರ ಎಂಬೆಸ್ಸಿ ಅಪಾರ್ಟ್​ಮೆಂಟ್​ನಲ್ಲಿ ಆಂಜಿನಪ್ಪ ವಜ್ಜಲ್ ವಾಸ ಮಾಡುತ್ತಿದ್ದಾರೆ. ಕಳೆದ ಭಾನುವಾರ ಕಾರು ಪಾರ್ಕಿಂಗ್ ವಿಚಾರವಾಗಿ ವಿಕ್ರಂ ರೈ ವಿರುದ್ಧ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಕಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಎರಡು ಕಡೆಯವರು ದೂರು ನೀಡಿದ್ದಾರೆ. ಈ ಬಗ್ಗೆ‌ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಓದಿ:ಫುಟ್ಬಾಲ್ ಸ್ಟೇಡಿಯಂನಲ್ಲಿ ಅಟ್ಟಾಡಿಸಿ ಕೊಲೆ: ವಾಟ್ಸಾಪ್ ಸ್ಟೇಟಸ್ ಹಾಕಿ ಸಾವಿಗೆ ಆಹ್ವಾನ ಕೊಟ್ನಾ ರೌಡಿಶೀಟರ್?

ABOUT THE AUTHOR

...view details