ಬೆಂಗಳೂರು: ಕಾಂಗ್ರೆಸ್ನವರಿಗೆ ಈಗಾಗಲೇ ಸೋಲುತ್ತೇವೆ ಎಂದು ಗೊತ್ತಾಗಿದೆ. ಅವರಿಗೆ ಟೇಬಲ್ ಹಾಕೋದಕ್ಕೂ ಜನ ಇಲ್ಲ ಎಂದು ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ಹೇಳಿದ್ರು.
ಕಾಂಗ್ರೆಸ್ನವರಿಗೆ ಟೇಬಲ್ ಹಾಕೋದಕ್ಕೂ ಜನ ಇಲ್ಲ: ನಂದೀಶ್ ರೆಡ್ಡಿ ವ್ಯಂಗ್ಯ - Former MLA Nandish reddy Statement in Bangalore news
ಕಾಂಗ್ರೆಸ್ನವರಿಗೆ ಚುನಾವಣೆಯಲ್ಲಿ ಸೋಲುತ್ತೇವೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಅವರಿಗೆ ಟೇಬಲ್ ಹಾಕೋದಕ್ಕೂ ಜನ ಇಲ್ಲ ಎಂದು ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ ವ್ಯಂಗ್ಯವಾಡಿದರು.
ನಾನು ಯಾವುದೇ ತ್ಯಾಗ ಮಾಡಿ ಕರ್ಣ ಆಗಿಲ್ಲ. ಬಿಜೆಪಿ ನನ್ನ ತಾಯಿ ಇದ್ದ ಹಾಗೆ. ತಾಯಿಗೆ ಯಾವುದೇ ಧಕ್ಕೆ ಆಗಬಾರದು. ತಾಯಿ ಹೇಳಿದ ಕೆಲಸ ಮಾಡ್ತಿದ್ದೇನೆ. ಇಬ್ಬರೂ ಒಟ್ಟಾಗಿ ಭಿನ್ನಾಭಿಪ್ರಾಯ ಇಲ್ಲದೆ ಕೆಲಸ ಮಾಡ್ತಿದ್ದೇವೆ. ಪಕ್ಷದ ಆದೇಶದ ಪ್ರಕಾರ ಕೆಲಸ ಮಾಡ್ತಿದ್ದೇನೆ. ಸಿದ್ದರಾಮಯ್ಯ ಬರಲಿ ಯಾರೇ ಬರಲಿ ಕ್ಷೇತ್ರದ ಜನ ಬಿಜೆಪಿ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು ಕ್ಷೇತ್ರದಲ್ಲಿ ಮಾಡಿದ ಕೆಲಸದಿಂದ ಜನ ನಮ್ಮ ಕೈ ಹಿಡಿಯುತ್ತಾರೆ. ಬಸವರಾಜ್ 5 ವರ್ಷಗಳ ಕಾಲ ಅವರ ಸ್ಟೈಲ್ ನಲ್ಲಿ ಕೆಲಸ ಮಾಡಿದರೆ ನಾನು ನನ್ನ ಸ್ಟೈಲ್ ನಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಗೆಲುವು ಖಚಿತ ಎಂದರು.