ಬೆಂಗಳೂರು : ವಿರಾಜ ಪೇಟೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಸವರಾಜ್ ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಈಟಿವಿ ಭಾರತದೊಂದಿಗೆ ಬಸವರಾಜ್ ಪಕ್ಷ ಸೇರುವ ಉದ್ದೇಶ ಹಾಗೂ ಮುಂದಿನ ರಾಜಕೀಯದ ಬಗ್ಗೆ ಮಾತನಾಡಿದರು.
ರಾಜಕೀಯ ಪಕ್ಷಗಳನ್ನು ತೀರ ಹತ್ತಿರದಿಂದ ನೋಡಿದಾಗ ಜೆಡಿಎಸ್ನ ವೈಚಾರಿಕ ಮತ್ತು ಕುಟುಂಬ ರಾಜಕಾರಣ ನನಗೆ ಸರಿ ಕಾಣಲಿಲ್ಲ. ಇನ್ನು ಒಳ ಜಗಳದಲ್ಲಿರುವ ಕಾಂಗ್ರೆಸ್ನಲ್ಲಿ ಅಧಿಕಾರ ದಾಹಿಗಳು ಹೆಚ್ಚಾಗಿದ್ದಾರೆ. ಮತ್ತೆ ಅದೊಂದು ಸಾಗರ. ರಾಜ್ಯದ ಎಲ್ಲಾ ಪ್ರಮುಖ ನಾಯಕರು ಆ ಪಕ್ಷದಲ್ಲಿದ್ದಾರೆ. ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆಯೇ ವಿನಃ ರಾಜ್ಯದ ಜನರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗೇ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಭಿನಾಭಿಪ್ರಾಯಗಳು ಹೆಚ್ಚಿರುವ ಕಾರಣ ಈ ನಿರ್ಧಾರ ಕೈಗೊಂಡಿರುವೆ ಎಂದು ಬಸವರಾಜ್ ತಿಳಿಸಿದರು.