ಕರ್ನಾಟಕ

karnataka

ETV Bharat / state

ಮಂಗಳೂರನ್ನು ಶಾಂತವಾಗಿರಲು ಬಿಡಿ: ಯು ಟಿ ಖಾದರ್ - protest against Citizenship Act

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಜವಾಬ್ದಾರಿ ಮರೆತು ಅಧಿಕಾರ ನಡೆಸುತ್ತಿವೆ ಎಂದು ಮಾಜಿ ಸಚಿವ ಯು. ಟಿ. ಆರೋಪಿಸಿದ್ದಾರೆ.

Former minister u.t.khadar
ಮಾಜಿ ಸಚಿವ ಯು.ಟಿ. ಖಾದರ್

By

Published : Dec 24, 2019, 9:37 PM IST

ಬೆಂಗಳೂರು: ಕೇಂದ್ರ ಹಾಗೂ ರಾಜ್ಯದಲ್ಲಿಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಜವಾಬ್ದಾರಿ ಮರೆತು ಅಧಿಕಾರ ನಡೆಸುತ್ತಿವೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಅವರು, ದೇಶದಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಕಾರಣ ಎಂದು​ ಮೇಲೆ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಎನ್​​ಡಿಎ ಅಂಗ ಪಕ್ಷಗಳೇ ಇಂದು ಎನ್ಆರ್​​ಸಿ, ಸಿಎಎ ವಿರುದ್ಧ ತಿರುಗಿ ಬಿದ್ದಿವೆ. ಇದಕ್ಕೆ ಉತ್ತರ ನೀಡಲಿ. ನಿಜವಾದ ದೇಶಪ್ರೇಮ ಇದ್ದರೆ ಉತ್ತಮ ಆಡಳಿತ ನಡೆಸಿ. ಅಧಿಕಾರ ಬೇಕಾದ ಕಡೆ ಮಾತನಾಡುವ ಧೈರ್ಯ ಇಲ್ಲ. ಇವರ ಪರ ಇರುವವರು ದೇಶಪ್ರೇಮಿಗಳು, ಇವರನ್ನು ಖಂಡಿಸುವವರು, ವಿರೋಧಿಸುವವರು ದೇಶದ್ರೋಹಿಗಳಾ? ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಬಲವಾಗಿರುವ ಭಾಗದಲ್ಲಿ ಗೋಲಿಬಾರ್, ಸಾವು ನೋವು ಆಗಿದೆ. ಕಾಲವೇ ಇದಕ್ಕೆ ಉತ್ತರ ನೀಡಲಿದೆ. ಅಂಬೇಡ್ಕರ್, ಗಾಂಧೀಜಿ ಅವರನ್ನು ಮೀರಿ, ವಿರುದ್ಧವಾಗಿ ದೇಶ ಕಟ್ಟಲು ಹೋದರೆ ಸರ್ವನಾಶ ಆಗಲಿದೆ. ರಾಜ್ಯದಲ್ಲಿ ಕೂಡ ಇದೇ ಸ್ಥಿತಿ ಆಗುತ್ತಿದೆ ಎಂದು ಖಾದರ್​ ಹೇಳಿದ್ರು.

ಶಾಸಕ ಯು.ಟಿ. ಖಾದರ್

ತನಿಖೆ ಆಗಲಿ:ಇಂದು ಶಾಂತಿಯಿಂದ ಕೂಡಿದ್ದ ಮಂಗಳೂರಲ್ಲಿ ಇಬ್ಬರ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಸಂಪನ್ಮೂಲ ಭರಿತವಾಗಿತ್ತು. ಆದರೀಗ ಎಲ್ಲ ಬದಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಮಾದರಿ ಆಗುತ್ತಿದೆ. ದೇಶ ಅಂತಹ ರಾಷ್ಟ್ರದ ಮಾದರಿ ಆಗುವುದು ಬೇಡ ಎಂದು ಎಚ್ಚರಿಕೆ ನೀಡಿದೆ. ಅದು ತಪ್ಪಾ? ಸಮಸ್ಯೆ ಬಗೆಹರಿಸುವ ಬದಲು ಗಲಾಟೆ ಮಾಡಿಸುವುದು ಎಷ್ಟು ಸರಿ? ಗಲಾಟೆ, ಗಲಭೆ ಬಗ್ಗೆ ಸೂಕ್ತ ತನಿಖೆ ಆಗಲಿ, ಸತ್ಯ ಹೊರ ಬೀಳಲಿ. ಮಂಗಳೂರಿನ ಅಮಾಯಕರ ಸಾವಿನ ಕುರಿತು ತನಿಖೆಯನ್ನು ಹೈಕೋರ್ಟ್​ನ ಹಾಲಿ ಜಡ್ಜ್ ಮೂಲಕ ಮಾಡಿಸಿ ಎಂದು ಖಾದರ್​ ಆಗ್ರಹಿಸಿದರು.

ಯಡಿಯೂರಪ್ಪ ಸರ್ಕಾರಕ್ಕೆ ಕಪ್ಪುಚುಕ್ಕೆ ತರಲು ಅವರ ಸರ್ಕಾರದ ಒಳಗೇ ಸಂಚು ನಡೆದಿದೆ. 20 ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು ಸರಿಯಾ? ಅನಗತ್ಯವಾಗಿ ಹೋರಾಟ, ಗಲಾಟೆಗೆ ಮುನ್ನವೇ ನಿಷೇಧಾಜ್ಞೆ ಅಗತ್ಯವಿದೆಯೇ? ಪೊಲೀಸ್ ಇಲಾಖೆ ಯಾರ ನಿಯಂತ್ರಣದಲ್ಲಿದೆ? ರಾಜ್ಯದಲ್ಲಿಂದು ಎದುರಾಗಿರುವ ಆತಂಕದಿಂದ ದೂರಮಾಡಲು ರಾಜ್ಯ ಸರ್ಕಾರ ರಾಜ್ಯದ ದಾಂಧಲೆಯ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಇಲ್ಲವಾದರೆ ನಾವು ಸದನದ ಒಳಗೆ, ಹೊರಗೆ ತೀವ್ರ ಪ್ರತಿಭಟನೆ, ಹೋರಾಟ ನಡೆಸುತ್ತೇವೆ ಎಂದರು.

ಗಲಭೆ ಬೇಡ:ದೇಶದ ವಿವಿಧ ಕಂಪನಿಗಳನ್ನು ದೇಶ ಮಾರಲು ಹೊರಟಿದೆ. ಅಭಿವೃದ್ಧಿ ಆಗಬೇಕು. ಗಲಭೆ ಆಗಬಾರದು. ದೇಶ ಅಭಿವೃದ್ಧಿಯತ್ತ ಸಾಗಬೇಕೆಂಬುದು ನನ್ನ ಆಶಯ. ಪೆಟ್ರೋಲಿಯಂ ಕಂಪನಿಯನ್ನು ದುಬೈ ಕಂಪನಿಗೆ, ಬಿಎಸ್​​ಎನ್​ಎಲ್ ಅನ್ನು ಖಾಸಗಿಯವರಿಗೆ ಮಾರಲು ಸರ್ಕಾರ ಮುಂದಾಗಿದೆ. ದೇಶವನ್ನು ನಾಲ್ಕೈದು ಕಂಪನಿಗಳಿಗೆ ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಖಂಡಿಸುತ್ತೇವೆ ಎಂದು ಹೇಳಿದ್ರು.

ಪೊಲೀಸ್ ಇಲಾಖೆಯೇ ಇಂದು ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ. ಪೊಲೀಸ್ ಇಲಾಖೆ ನನ್ನ ವಿರುದ್ಧ ದಾಖಲಾದ ಪ್ರಕರಣದ ಎಫ್ಐಆರ್ ಅನ್ನು ಪಕ್ಷದ ಕಚೇರಿಗೆ ಕಳಿಸಲಾಗಿದೆ. ಪಾಕಿಸ್ತಾನದ ಜತೆ ಕ್ರಿಕೆಟ್ ಆಟ, ಬಸ್ ಸಂಚಾರ ಆರಂಭಿಸಿದ್ದು ಯಾರು? ಪಾಕಿಗಳು ಇಲ್ಲಿಗೆ ಬರುತ್ತಾರೆ ಅಂದರೆ ಆ ಸಂಬಂಧ ತನಿಖೆ ನಡೆಸಿ. ಅಮಾಯಕರನ್ನು, ಇಲ್ಲಿಯೇ ವಾಸವಾಗಿರುವವರಿಗೆ ಪೌರತ್ವ ಮಾಹಿತಿ ನೀಡಿ ಎಂದರೆ ಹೇಗೆ? ಅಶಿಕ್ಷಿತರು, ಅಲೆಮಾರಿಗಳು, ಗುಡ್ಡಗಾಡು ನಿವಾಸಿಗಳು ಎಲ್ಲಿಂದ ದಾಖಲೆ ತರಲು ಸಾಧ್ಯ? ದೇಶದಲ್ಲಿ ಉದ್ಯೋಗ ಹೆಚ್ಚಿಸಿ, ಆಮೇಲೆ ಬೇರೆ ಕಡೆ ಗಮನ ಹರಿಸಿ. ಇವೆಲ್ಲಾ ದೇಶಪ್ರೇಮವಾ? ಎಲ್ಲರಿಗೂ ದೇಶದ ಮೇಲೆ ಗೌರವ ಮೂಡಿಸುವ ನಿಜವಾದ ಕಾರ್ಯ ಮಾಡಿ ಎಂದು ಖಾದರ್​ ಒತ್ತಾಯಿಸಿದರು.

ABOUT THE AUTHOR

...view details