ಕರ್ನಾಟಕ

karnataka

ETV Bharat / state

ಐಪಿಎಲ್ ಎಫೆಕ್ಟ್ : ತಡರಾತ್ರಿ ಪಟಾಕಿ ಸಂಭ್ರಮಕ್ಕೆ ಬ್ರೇಕ್ ಹಾಕುವಂತೆ ಡಿಸಿಪಿಗೆ ಪತ್ರ ಬರೆದ ಮಾಜಿ‌ ಸಚಿವ ಸುರೇಶ್ ಕುಮಾರ್ - ಪಟಾಕಿ ಸಂಭ್ರಮಕ್ಕೆ ಬ್ರೇಕ್ ಹಾಕುವಂತೆ ಡಿಸಿಪಿಗೆ ಪತ್ರ ಬರೆದ ಮಾಜಿ‌ ಸಚಿವ ಸುರೇಶ್ ಕುಮಾರ್

ಪಟಾಕಿ ಹೊಡೆದು ಸಂಭ್ರಮಿಸಿದರೆ ವೃದ್ದರಿಗೆ ಮತ್ತು ಮಕ್ಕಳಿಗೆ ಹಾಗೂ ಖಾಯಿಲೆಯಿಂದ ಬಳಲುತ್ತಿರುವವರಿಗೆ ತೊಂದರೆಯಾಗಲಿದೆ. ಪಶು-ಪಕ್ಷಿಗಳಿಗೂ ಪಟಾಕಿಯಿಂದ ಎಫೆಕ್ಟ್ ಆಗಲಿದೆ. ಹೀಗಾಗಿ, ರಾತ್ರಿ 10ರ ನಂತರ ಈ ರೀತಿ ಸಂಭ್ರಮಿಸಲು ಅವಕಾಶ ನೀಡದಂತೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಡಿಸಿಪಿ‌ ಸಂಜೀವ ಪಾಟೀಲ್​ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ..

ಮಾಜಿ‌ ಸಚಿವ ಸುರೇಶ್ ಕುಮಾರ್
ಮಾಜಿ‌ ಸಚಿವ ಸುರೇಶ್ ಕುಮಾರ್

By

Published : May 23, 2022, 7:13 PM IST

ಬೆಂಗಳೂರು : ನಗರದಲ್ಲಿ ಐಪಿಎಲ್ ಹಾಗೂ ಹುಟ್ಟುಹಬ್ಬದ ಸಂಭ್ರಮ ಹೆಚ್ಚಾದಂತೆ ಮಧ್ಯರಾತ್ರಿ ಕ್ರಿಕೆಟ್ ಪ್ರೇಮಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸುತ್ತಿರುವುದರಿಂದ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡದಂತೆ ‌ಮಾಜಿ ಸಚಿವ ಸುರೇಶ್ ಕುಮಾರ್ ಅವರು ಪಶ್ಚಿಮ ವಿಭಾಗದ ಡಿಸಿಪಿ‌ಗೆ‌ ಪತ್ರ ಬರೆದಿದ್ದಾರೆ.

ಪಟಾಕಿ ಸಂಭ್ರಮಕ್ಕೆ ಬ್ರೇಕ್ ಹಾಕುವಂತೆ ಡಿಸಿಪಿಗೆ ಪತ್ರ ಬರೆದ ಮಾಜಿ‌ ಸಚಿವ ಸುರೇಶ್ ಕುಮಾರ್

ಕಳೆದ ಎರಡು ತಿಂಗಳಿಂದ ಐಪಿಎಲ್ ಪಂದ್ಯಾವಳಿ ನಡೆಯುತ್ತಿದೆ. ತಮ್ಮ ನೆಚ್ಚಿನ ತಂಡಗಳು ಗೆದ್ದಾಗ ಮಧ್ಯರಾತ್ರಿ ಪಟಾಕಿ ಹೊಡೆದು ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಾರೆ. ಅದೇ ರೀತಿ ಹುಟುಹಬ್ಬ ಆಚರಣೆ ವೇಳೆಯೂ ವಸತಿ‌‌ ಪ್ರದೇಶಗಳಲ್ಲಿ ಪಟಾಕಿ ಸಿಡಿಸುತ್ತಿರುವುದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ.

ಪಟಾಕಿ ಹೊಡೆದು ಸಂಭ್ರಮಿಸಿದರೆ ವೃದ್ದರಿಗೆ ಮತ್ತು ಮಕ್ಕಳಿಗೆ ಹಾಗೂ ಖಾಯಿಲೆಯಿಂದ ಬಳಲುತ್ತಿರುವವರಿಗೆ ತೊಂದರೆಯಾಗಲಿದೆ. ಪಶು-ಪಕ್ಷಿಗಳಿಗೂ ಪಟಾಕಿಯಿಂದ ಎಫೆಕ್ಟ್ ಆಗಲಿದೆ. ಹೀಗಾಗಿ, ರಾತ್ರಿ 10ರ ನಂತರ ಈ ರೀತಿ ಸಂಭ್ರಮಿಸಲು ಅವಕಾಶ ನೀಡದಂತೆ ಡಿಸಿಪಿ‌ ಸಂಜೀವ ಪಾಟೀಲ್​ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಓದಿ:ನಾ ಈವರೆಗೂ ಗೋಮಾಂಸ ತಿಂದಿಲ್ಲ.. ತಿನ್ನಬೇಕು ಅನಿಸಿದ್ರೇ ತಿಂದೇ ತಿನ್ನುತ್ತೇನೆ.. ಇವರ್ಯಾರೀ ಕೇಳೋಕೆ.. ಸಿದ್ದರಾಮಯ್ಯ ಗುಡುಗು

For All Latest Updates

TAGGED:

ABOUT THE AUTHOR

...view details