ಕರ್ನಾಟಕ

karnataka

ETV Bharat / state

ವಿಧಾನಸೌಧ ಆವರಣದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸಿ; ಸಿಎಂಗೆ ಎಸ್.ಕೆ ಬೆಳ್ಳುಬ್ಬಿ ಮನವಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಭೇಟಿ ಮಾಡಿ ವಿಧಾನಸೌಧ ಇಲ್ಲವೇ ವಿಕಾಸಸೌಧದ ಆವರಣದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದಾರೆ.

SK Bellubbi
ಎಸ್.ಕೆ ಬೆಳ್ಳುಬ್ಬಿ

By

Published : Sep 19, 2020, 5:41 PM IST

ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮನವಿ ಮಾಡಿದ್ದಾರೆ.

ನವದೆಹಲಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದಿರುಗುತ್ತಿದ್ದಂತೆ ಸಿಎಂ ನಿವಾಸ ಕಾವೇರಿಗೆ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಭೇಟಿ ನೀಡಿದರು. ವಿಧಾನಸೌಧ ಇಲ್ಲವೇ ವಿಕಾಸಸೌಧದ ಆವರಣದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಿಸುವಂತೆ ಮನವಿ ಸಲ್ಲಿಸಿದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ

ಸಿಎಂ ಭೇಟಿ ನಂತರ ಮಾತನಾಡಿದ ಅವರು, ಬಸವಣ್ಣ ಬಸವನಬಾಗೇವಾಡಿ ಇಂಗಳೇಶ್ವರರಲ್ಲಿ ಜನಿಸಿ, ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ, ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ್ದರು, ಕಲ್ಯಾಣ ಕ್ರಾಂತಿಗೆ ಕಾರಣೀಕರ್ತರಾದ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ, ಸಮಾನತೆಗಾಗಿ ಶರಣರನ್ನು ತಯಾರು ಮಾಡಿ, ಅಲ್ಲಮ ಪ್ರಭುಗಳ ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದ್ದರು, ಇದೊಂದು ಜಗತ್ತಿನ ಮೊದಲ ಸಂಸತ್ತು. ಈ ಮೂಲಕ ಜಗತ್ತಿನಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದು, ವಚನ ಸಾಹಿತ್ಯವನ್ನು ಹುಟ್ಟು ಹಾಕುವ ಮೂಲಕ ಸ್ತ್ರೀ ಸಮಾನತೆಯನ್ನು ಸಾರಿದ, ನಿತ್ಯ ಕಾಯಕ, ದಾಸೋಹ ಮತ್ತು ಪ್ರಸಾದ ಇಂತಹ ಮೌಲ್ಯಗಳನ್ನು ಮಾನವ ಜನಾಂಗಕ್ಕೆ ನೀಡಿದ ಮಹಾ ಮಾನವತವಾದಿ ಅಣ್ಣ ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧ-ವಿಕಾಸಸೌಧದ ಆವರಣದಲ್ಲಿ ಸ್ಥಾಪಿಸುವ ಮೂಲಕ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಬೇಕಾಗಿ ವಿನಂತಿ ಮಾಡಿದ್ದೇನೆ ಎಂದರು.

ಈಗಾಗಲೇ ಮುರುಘಾ ಶರಣರು ತಮಗೆ ಮನವಿ ಮಾಡಿಕೊಂಡಿದ್ದು,ಈ ಬೇಡಿಕೆಯನ್ನು ಆ ಭಾಗದ ಮಾಜಿ ಸಚಿವರಾಗಿ, ಶಾಸಕರಾಗಿ ಬಸವಣ್ಣನ ಪ್ರತಿಮೆ ನಿರ್ಮಿಸುವ ಬೇಡಿಕೆಯನ್ನು ಈಡೇರಿಸಬೇಕಾಗಿ
ಈ ಮೂಲಕ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ABOUT THE AUTHOR

...view details