ಕರ್ನಾಟಕ

karnataka

ETV Bharat / state

ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್​ ರದ್ದು: ಪ್ರೇಮಕುಮಾರಿ ಪ್ರಕರಣದಲ್ಲಿ ಮಾಜಿ ಸಚಿವ ರಾಮ್​ದಾಸ್​​ಗೆ ಸಮನ್ಸ್ - Ram Das summons in Premakumari case

ಪ್ರೇಮಕುಮಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಜನಪ್ರತಿನಿಧಿ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಸಲ್ಲಿಸಿದ್ದ ಬಿ ರೀಪೊರ್ಟ್​ನನ್ನ ರದ್ದು ಪಡಿಸಿದೆ.

ಮಾಜಿ ಸಚಿವ ರಾಮ್​ದಾಸ್​​ಗೆ ಸಮನ್ಸ್

By

Published : Oct 21, 2019, 10:22 PM IST

ಬೆಂಗಳೂರು: ನಂಬಿಕೆ ದ್ರೋಹ ಪ್ರಕರಣದಲ್ಲಿ ಪ್ರೇಮಕುಮಾರಿ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆಗೆ ತೆಗೆದುಕೊಂಡ ಜನಪ್ರತಿನಿಧಿ ನ್ಯಾಯಾಲಯ ಬಿಜೆಪಿಯ ಕೆ.ಆರ್. ನಗರ ಶಾಸಕಾರದ ಮಾಜಿ ಸಚಿವ ರಾಮ್​​​ದಾಸ್ ಅವರಿಗೆ ಸಮನ್ಸ್ ನೀಡಿದೆ.

ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ರಾಮ್ ದಾಸ್​ಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ರಾಮ್​ದಾಸ್ ಪ್ರೇಮಕುಮಾರಿ ಅವರನ್ನು ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ನ್ಯಾಯ ದೊರಕಿಸಿ ಕೊಡಿ ಎಂದು ಪ್ರೇಮಕುಮಾರಿ ನ್ಯಾಯಾಲಯದ ಮೊರೆ ಹೋಗಿದ್ದರು.

ರಾಮ್​ದಾಸ್ ಮತ್ತು ಪ್ರೇಮಕುಮಾರಿ ನಡುವಿನ ಮೋಸ ಹಾಗೂ ವಂಚನೆ ಪ್ರಕರಣದಲ್ಲಿ, ಮಾಜಿ ಸಚಿವರ ಪಾತ್ರ ಇಲ್ಲವೆಂದು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಸಲ್ಲಿಸಿದ್ದ ಬಿ ರೀಪೊರ್ಟ್​ನ್ನ ನ್ಯಾಯಾಲಯ ರದ್ದು ಪಡಿಸಿದೆ. ಕೋರ್ಟ್ ವಿಚಾರಣೆಯಿಂದ ರಾಮ್​​ದಾಸ್ ಮತ್ತು ಪ್ರೇಮಕುಮಾರಿ ಅವರ ಪ್ರೇಮ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ.

ABOUT THE AUTHOR

...view details