ಕರ್ನಾಟಕ

karnataka

ETV Bharat / state

ಗೃಹ ಸಚಿವರು ಜನಸ್ಪಂದನ ಬದಲು ಭ್ರಷ್ಟಾಚಾರ ಸ್ಪಂದನ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ: ಪ್ರಿಯಾಂಕ್ ಖರ್ಗೆ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಪಾರ್ಟಿಯಲ್ಲಿ ಏನು ನಡೀತಾ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಜನ ಸ್ಪಂದನ ಕಾರ್ಯಕ್ರಮ ಮೂರು ಸಲ ಮುಂದೂಡಿಕೆ ಮಾಡಿದರು. ಭ್ರಷ್ಟಾಚಾರ ಸ್ಪಂದನ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ ಲೇವಡಿ ಮಾಡಿದ್ದಾರೆ.

former-minister-priyank-kharge-teases-araga-jnanendra
ಗೃಹ ಸಚಿವರು ಜನಸ್ಪಂದನ ಬದಲು ಭ್ರಷ್ಟಾಚಾರ ಸ್ಪಂದನ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ: ಪ್ರಿಯಾಂಕ್ ಖರ್ಗೆ

By

Published : Nov 7, 2022, 10:12 PM IST

ಬೆಂಗಳೂರು :ಗೃಹ ಸಚಿವ ಆರಗ ಜ್ಞಾನೇಂದ್ರ ಜನಸ್ಪಂದನ ಬದಲು ಭ್ರಷ್ಟಾಚಾರದ ಸ್ಪಂದನ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ ಅವರು ತಮ್ಮ ಪಕ್ಷದಲ್ಲಿ ಏನು ನಡೀತಾ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಜನ ಸ್ಪಂದನ ಕಾರ್ಯಕ್ರಮ ಮೂರು ಸಲ ಮುಂದೂಡಿಕೆ ಮಾಡಿದರು. ಭ್ರಷ್ಟಾಚಾರ ಸ್ಪಂದನ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಜನರಿಂದ ಎಲ್ಲೂ ಸ್ಪಂದನೆ ಸಿಕ್ಕಿಲ್ಲ.

ರೇಣುಕಾಚಾರ್ಯ ಅವರು ಏನು ಹೇಳಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲಿ. ಪಿಎಸ್ ಐ ಹಗರಣದಲ್ಲಿ ಉನ್ನತ ಅಧಿಕಾರಿ ಯಾಕೆ ಜೈಲಿನಲ್ಲಿ ಇದ್ದಾರೆ ಹೇಳಲಿ. ಯತ್ನಾಳ್ ದಿನಕ್ಕೊಂದು ಹೇಳಿಕೆ ಕೊಡ್ತಾ ಇದ್ದಾರೆ. ಅರುಣ್ ಸಿಂಗ್ ಅವರು ಯತ್ನಾಳ್ ಗೆ ನಮ್ಮ ಪಕ್ಷದವರು ಅಲ್ಲ ಎಂದಿದ್ದಾರೆ. ಯಾವ ಬಿ ಫಾರಂ ನಲ್ಲಿ ಗೆದ್ದರು ಎಂದು ಅವರು ಪ್ರಶ್ನಿಸಿದರು.

ಭ್ರಷ್ಟಾಚಾರದ ತನಿಖೆ ಮಾಡಲಿ : ಸಿಎಂ ಸ್ಥಾನಕ್ಕೆ ಎಷ್ಟು ಹಣ ಕೊಡಬೇಕು ಎಂದು ಅವರು ಹೇಳಿದ್ದಾರಲ್ಲಾ. ಅವರ ಮನೆ ಮೂರು ಬಾಗಿಲು ಅಲ್ಲ ನೂರು ಬಾಗಿಲು ಆಗಿದೆ. ತನಿಖೆ ಮಾಡಬೇಡಿ ಎಂದು ಯಾರು ಹೇಳಿದ್ದು?. ಸದನದಲ್ಲಿ ಸಿಎಲ್ ಪಿ ಲೀಡರ್ ಓಪನ್ ಚಾಲೆಂಜ್ ಕೊಟ್ಟಿದ್ದಾರೆ. ನಮ್ಮ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ಎಂದು ನಮ್ಮ ನಾಯಕರು ಹೇಳಿದ್ದಾರೆ. ತನಿಖೆಯಿಂದ ನಾವು ಹೆದರುತ್ತಿದ್ದೇವಾ.

ಏನೂ ಇಲ್ಲ. ನಿಮ್ಮದೇ ಐಟಿ, ಇಡಿ, ಎಲ್ಲ ನಿಮ್ಮದೇ ಇದೆ. ಮೇಲೆ ಕೆಳಗೆ ನಿಮ್ಮದೇ ಸರ್ಕಾರ ಇದೆ. ಎಷ್ಟು ದಿನ ಬುಟ್ಟಿಲಿ ಹಾವಿದೆ ಅಂತ ತೋರಿಸ್ತೀರಾ? ಎಂದು ಪ್ರಶ್ನಿಸಿದರು.

ಪ್ರಜ್ಞೆ ಇಲ್ಲದೆ ಮಾತಾಡಿದರೆ ಏನು ಉತ್ತರ ಕೊಡೋದು: ಇನ್ನು ಜನರಿಗೆ ಏನಾಗುತ್ತಿದೆ ಎಂದು ಗೊತ್ತಾಗಲಿ. ಜವಾಬ್ದಾರಿಯಿಂದ ಮಾತಾಡಬೇಕಾಗುತ್ತದೆ. ರಸ್ತೆ ಗುಂಡಿ ಮುಚ್ಚಿ ಎಂದರೆ ಕಾಂಗ್ರೆಸ್ ಕಾಲದಲ್ಲಿ ಆಗಿಲ್ವಾ ಅಂತಾರೆ. ಪ್ರಜ್ಞೆ ಇಲ್ಲದೇ ಮಾತಾಡಿದರೆ ಏನು ಉತ್ತರ ಕೊಡೋದು. ಕೋರ್ಟ್ ಛೀಮಾರಿ ಹಾಕಿದರೂ ತಲೆ ಕಡೆಸಿಕೊಂಡಿಲ್ಲ. ವಿದ್ಯಾರ್ಥಿ ಮಾತಾಡಿದ್ದಾರೆ ಅಂದರೆ ನಾಚಿಕೆಯಿಂದನಾದರೂ ಕೆಲಸ ಮಾಡಲಿ. ಮೋದಿ ಬಂದಾಗ ರೋಡ್ ಕಿತ್ತು ಬಂತಲ್ಲಾ, ಅದರ ಬಗ್ಗೆಯೇ ತನಿಖೆ ಮಾಡಿಲ್ಲ.ಇನ್ನು ಪುಟ್ಟ ಬಾಲಕಿ ಮಾತು ಕೇಳ್ತಾರಾ..? ಎಂದು ಪ್ರಶ್ನಿಸಿದರು.

ಬಹುಮತ ಗಳಿಸುತ್ತೇವೆ: ವಿಧಾನಸಭೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಮಾತನಾಡಿ, ಪಕ್ಷ ಸಂಘಟನೆ ಖಂಡಿತ ಆಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಇವರಿಂದ ಬಲ ಬಂದಿದೆ. 2023ಕ್ಕೆ ಬಹುಮತ ಬರೋದು ಖಂಡಿತ. 2024 ರಲ್ಲಿ ರಾಷ್ಟ್ರದಲ್ಲಿಯೂ ಕಾಂಗ್ರೆಸ್ ಬರುವ ನಿರೀಕ್ಷೆ ಇದೆ. ಬಣ ರಾಜಕೀಯ ಯಾವುದೂ ಇಲ್ಲ. ಖರ್ಗೆ ಅವರು ಬುದ್ದಿವಾದ ಹೇಳಿದ್ದು ನಿಜ.

ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಿಡೋಣ ಎಂದು ಹೇಳಿದ್ದಾರೆ ಅವರು. ಪಕ್ಷ ಸಂಘಟನೆ ಆಗಬೇಕು ಅಂದರೆ ಯುವಕರಿಗೆ, ಮಹಿಳೆಯರಿಗೆ ಟಿಕೆಟ್ ಕೊಡೋಣ ಎಂದು ಹೇಳಿದ್ದಾರೆ. ಯುವಕರು ಬರಲಿ ತಪ್ಪು ಏನಿದೆ. ಹಿರಿಯರಿಗೆ ಟಿಕೆಟ್ ತಪ್ಪಬಹುದು. ನಾನು ಹಾಗೂ ನನ್ನ ಮಗನಿಗೂ ಟಿಕೆಟ್ ಕೇಳ್ತೀನಿ ಯಾರಿಗೆ ಕೊಡುತ್ತಾರೆ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ :ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ರಾಜ್ಯ ನಾಯಕರಿಗೆ ಸೂಚಿಸಿದ್ದೇನೆ: ಖರ್ಗೆ

ABOUT THE AUTHOR

...view details