ಬೆಂಗಳೂರು :ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಜನರ ಮನಸ್ಸು ಕೆಡಿಸುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದು.. ಮೋದಿ ಮುಸ್ಲಿಂ ದೇಶಗಳ ಜತೆ ವ್ಯಾಪಾರ ಕಟ್ ಮಾಡಲಿ :ಕಳೆದೆರಡು ದಿನಗಳಿಂದ ಕೆಲ ಸಂಘಟನೆಗಳು ಬೇರೆ ಸಮುದಾಯಗಳ ಜೊತೆ ವ್ಯಾಪಾರಕ್ಕೆ ಒಪ್ಪುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಕ್ಕೆ ತೊಂದರೆ ಯಾಕೆ? ಮೋದಿ ಮುಸ್ಲಿಂ ದೇಶಗಳ ಜತೆ ವ್ಯಾಪಾರ ಮಾಡುತ್ತಿದ್ದಾರೆ. ಅದನ್ನು ಯಾಕೆ ಮೊದಲು ಕಟ್ ಮಾಡಿಲ್ಲ. ಈಗ ಹಲಾಲ್ ಕಟ್, ಜಟಕಾ ಕಟ್ ನಡೆಯುತ್ತಿದೆ ಎಂದರು.
ಭ್ರಷ್ಟಾಚಾರದಲ್ಲಿ ಸರ್ವವ್ಯಾಪಿ :ಬಿಜೆಪಿ ನಾಯಕ ಆರ್ಥಿಕ ಜಿಹಾದ್ ಮಾಡುತ್ತೇವೆ ಅಂತಾ ಹೇಳುತ್ತಾರೆ. ಬೊಮ್ಮಾಯಿ ಮೋದಿಯಂತೆ ಬಜೆಟ್‌ನಲ್ಲಿ ಚೆಂದದ ಹೆಸರು ಕೊಟ್ಟಿದ್ದಾರೆ. ಸರ್ವಸ್ಪರ್ಶಿ, ಸರ್ವವ್ಯಾಪಿ ಅಂತಾ ಬಜೆಟ್‌ನಲ್ಲಿ ಹೇಳುತ್ತಾರೆ. ಆದರೆ, ಇವರು ಭ್ರಷ್ಟಾಚಾರದಲ್ಲಿ ಸರ್ವವ್ಯಾಪಿ ಮಾಡಿದ್ದಾರೆ. ಬಿಜೆಪಿ ಸರ್ಕಾದ ಜಿಹಾದ್ ನಡೆಯುತ್ತಿದೆ. ಶಿಕ್ಷಣ, ದಲಿತರು, ಮಹಿಳೆಯರು, ಹಿಂದುಳಿದವರ ಬಲವರ್ಧನೆಗೆ ಜಿಹಾದ್ ಮಾಡುತ್ತಿಲ್ಲ.
ನಾವು ತಂದಂತ ಆರ್ಥಿಕ ಬಲವರ್ಧನೆ ಕಾರ್ಯಕ್ರಮ ನೆಲ ಕಚ್ಚಿವೆ. ಸಮೃದ್ಧಿ ಅಂತಾ ಯೋಜನೆ ಮಾಡಿದ್ದೆವು. ಸಣ್ಣ ಯೋಜನೆ ನಿಲ್ಲಿಸಲಾಗಿದೆ ಅಂತಾ ಕಾರಜೋಳ ಹೇಳಿದರು. ಇದು ಎಸ್ಸಿ, ಎಸ್ಟಿ ಕಾರ್ಯಕ್ರಮ ಸಮೃದಿ ಯೋಜನೆಯನ್ನು ಇವತ್ತು ಕಟ್ ಮಾಡಿದ್ದಾರೆ ಎಂದು ಆರೋಪಿಸಿದರು. ಸಮೃದಿ ಯೋಜನೆ 224 ಕೋಟಿ ಯೋಜನೆಗೆ ಇತ್ತು.
ಭೋವಿ ನಿಗಮ, ಜಾಂಭವ ನಿಗಮದ ಯೋಜನೆ ಕಟ್ ಮಾಡಿದ್ದಾರೆ. ಹತ್ತು ಲಕ್ಷದ ಯೋಜನೆ ಕಟ್ ಮಾಡಿ, ಈಗ ಐವತ್ತು ಸಾವಿರ ನೀಡುತ್ತಿದ್ದಾರೆ. ಐರಾವತ ಯೋಜನೆ ಅಂತಾ ಟ್ಯಾಕ್ಸಿಗೆ ಅನುಧಾನ ಕೊಡುತ್ತಿದ್ದೆವು. 2018ರಿಂದ ಐರಾವತಗೆ ಹಣ ನೀಡಿಲ್ಲ. ಬಡ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿಲ್ಲ. ಇದಕ್ಕೆಲ್ಲ ನಾವು ಜಿಹಾದ್ ಅಂತಾ ಹೇಳಬಹುದು ಎಂದರು.
ಸರ್ಕಾರ ಮುಸ್ಲಿಂ ಅಷ್ಟೇ ಅಲ್ಲ, ಎಲ್ಲ ಸಮುದಾಯ ಮೇಲೆ ಜಿಹಾದ್ ಮಾಡುತ್ತಿದೆ. ಗಂಗಾಕಲ್ಯಾಣ ಯೋಜನೆ ಅವ್ಯವಹಾರ ಆಗಿದೆ. ಒಂದೇ ಬೋರ್‌ಗೆ ಎರಡು ತರಹ ಅನುದಾನ ನೀಡುತ್ತಿದ್ದಾರೆ. ಮಾಜಿ ಸಚಿವ ರೇಣುಕಾಚಾರ್ಯ ಫೇಕ್ ಎಸ್ಟಿ ಸರ್ಟಿಫಿಕೇಟ್ ಪಡೆದಿದ್ದಾರೆ. ಇದು ಸಂವಿಧಾನದ ಜಿಹಾದ್ ಅಲ್ವ ಅಂತಾ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಇದು 40% ಸರ್ಕಾರ :ವ್ಯಾಪಾರಸ್ಥರು ಭಾರತ ದೇಶದವರಲ್ವಾ? ಇದು 40% ಸರ್ಕಾರ. ಪಿಎಂಗೆ ಹಿರೋಯಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡೋದಕ್ಕೆ ಸಮಯ ಇದೆ. ಕಂಟ್ರಾಕ್ಟರ್ ಕೊಟ್ಟ ದೂರಿಗೆ ರಿಯಾಕ್ಟ್ ಮಾಡೋದಕ್ಕೆ ಸಮಯ ಇಲ್ವಾ? ಬಿಜೆಪಿ ಮುಂಖಡರೇ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ. ದೊಡ್ಡ ದೊಡ್ಡವರನ್ನ ಬೇಟೆಯಾಡಿ. ಮೋದಿಯವರ ಬಳಿ ಹೋಗಿ ಮಾತಾಡಿ. ನಿಮಗೆ ಲಾಭ ಇದ್ದಾಗ ಮಾತ್ರ ಹಿಂದುಳಿದವರ ಬಗ್ಗೆ ಕಾಳಜಿವಹಿಸಿತ್ತೀರಾ ? ಎಂದು ಪ್ರಶ್ನಿಸಿದರು.