ಬೆಂಗಳೂರು:ರಾಜಕೀಯದಲ್ಲಿ ಎಷ್ಟೇ ಅನುಭವವಿದ್ದರೂ ಸೋತ ನಂತರ ಗೆದ್ದಿರುವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ, ಸೋತವರು ಅನುಭವಿಗಳಾದರೂ ಸಹ ಅವರ ಅನುಭವವನ್ನು ಹಂಚಿಕೊಳ್ಳಬಹುದೇ ವಿನಃ ಕಾನೂನು ಮಾಡುವಂತಹ ವಿಷಯದಲ್ಲಿ ಕಾರ್ಯಶೀಲರಾಗುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದ್ದಾರೆ.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸಿ ಪಿ ನಗರದ ನಿವಾಸದಲ್ಲಿ ಮಾತನಾಡಿದ ಪಿಜಿಆರ್ ಸಿಂಧ್ಯಾ ಅವರಿಗೆ ಸಿಂಧ್ಯಾ ಪ್ರಸ್ತುತ ರಾಜಕೀಯದಿಂದ ದೂರವಿದ್ದಾರೆ, ಯಾಕೆ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಪಿಜಿಆರ್ ಸಿಂಧ್ಯಾ, ನಾನು ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದೇನೆ, ಸೋತವರು ಎಷ್ಟೇ ಅನುಭವಿಗಳಾದರೂ ಕಾನೂನು ನಡೆಸುವ ವಿಚಾರದಲ್ಲಿ ಕಾರ್ಯಶೀಲರಾಗುವುದು ಸಾಧ್ಯವಿಲ್ಲ, ಆದ್ದರಿಂದ ನಾನು ಕಾನೂನು ಮಾಡುವಂತಹ ವಿಚಾರದಲ್ಲಿ ಸ್ವಲ್ಪ ದೂರವಿದ್ದೇವೆ ಅಷ್ಟೇ. ರಾಜಕಾರಣದಲ್ಲಿ ಜನರ ಅಪೇಕ್ಷೆಯಂತೆ ನಾವು ಕೆಲಸ ಮಾಡಬೇಕಾಗುತ್ತದೆ.
ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ, ಭೂಮಿ ಹಾಗೂ ಅಂತರ್ಜಲ ಕಾಪಾಡುವುದರ ಬಗ್ಗೆ ಹಾಗೂ ಪರಿಸರವನ್ನು ಕಾಪಾಡುವಂತಹ ವಿಚಾರವಾಗಿ ನಾವು ಭಾರತ್ ಸ್ಕೌಟ್ಸ್ ಗೈಡ್ಸ್ ಜೊತೆಯಲ್ಲಿ ಎನ್ಎಸ್ಎಸ್, ಎನ್ಸಿಸಿ ಹಾಗೂ ರೆಡ್ಕ್ರಾಸ್ ಸಂಸ್ಥೆಗಳು ಅತ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಈಗ ನಾವು ಈ ಸಂಸ್ಥೆಗಳ ಜೊತೆ ಸೇರಿ ಪರಿಸರವನ್ನು ಸಂರಕ್ಷಣೆ ಮಾಡುವ ವಿಚಾರವಾಗಿ ಸ್ಕೌಟ್ ಅಂಡ್ ಗೈಡ್ಸ್ಗೆ ನನ್ನ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದೇನೆ. ಆದ್ದರಿಂದಲೇ ಇಂದು ಕೇಂದ್ರ ಸಚಿವರಿಗೆ ನಮ್ಮ ಸ್ಕೌಟ್ಸ್ ಅಂಡ್ ಗೈಡ್ಸ್ನ ಸ್ಕಾರ್ಫ್ನ್ನು ಹಾಕಿ ಗೌರವಿಸಿದ್ದೇನೆ, ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಿಳಿಸಿದರು.
1973-74 ರಿಂದ ನಾನು ನನ್ನ ಕೈಲಾದಮಟ್ಟಿಗೆ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ದೇಶದ ಜನ ರಾಜ್ಯದ ಜನ ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ನಾನು ನಡೆದು ಕೊಳ್ಳಬೇಕಿದೆ. ಅದಕ್ಕೆ ಪೂರಕವಾಗಿ ನಾನು ಖಂಡಿತವಾಗಿ ಇರುತ್ತೇನೆ, ನಾನು ಯಾರ ಬಗ್ಗೆಯು ದ್ವೇಷದ ಮಾತು, ಅಲ್ಲಿಂದ ಇಲ್ಲಿಗೆ ಹೋಗೋದು, ಅದರ ಬಗ್ಗೆ ಎಲ್ಲ ನಾನು ಮಾತನಾಡೋಕೆ ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಸ್ತುತ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.