ಕರ್ನಾಟಕ

karnataka

ETV Bharat / state

ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರ: ಮಾಜಿ ಸಚಿವ ಮನಗೂಳಿ - Former minister MCManagooli statement

ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿಕೆ

By

Published : Oct 9, 2019, 7:13 PM IST

ಬೆಂಗಳೂರು: ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಅಭಿವೃದ್ಧಿ ಕೆಲಸ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಅಷ್ಟೇ. ನಾನು ಹುಟ್ಟಿದ್ದು ಇದೇ ಪಕ್ಷದಲ್ಲಿ. ಸಾಯೋದು ಇದೇ ಪಕ್ಷದಲ್ಲೇ ಎಂದು ಸ್ಪಷ್ಟನೆ ನೀಡಿದರು.

ಇಷ್ಟು ವರ್ಷ ಜೆಡಿಎಸ್‌ನಲ್ಲೇ ಇದ್ದೇನೆ. ಈಗ ನನಗೆ 84 ವರ್ಷ. ಈಗ ಯಾಕೆ ಪಕ್ಷ ಬಿಟ್ಟು ಹೋಗಲಿ. ನಮ್ಮನ್ನು ಯಾರೂ ಭೇಟಿ ಮಾಡಿಲ್ಲ. ನಾನು ಪಕ್ಷವನ್ನು ಬಿಡೋದಿಲ್ಲ ಎಂದರು.

ABOUT THE AUTHOR

...view details